ಪುತ್ತೂರು :ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ದ.ಕ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಇದರ ವತಿಯಿಂದ ಡಿ.2 ರಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಉಳ್ಳಾಲ ನಗರ ಸಭಾ ಸಭಾಂಗಣದಲ್ಲಿ ನಡೆಯಲಿದೆ. ಯುವಜನೋತ್ಸವದಲ್ಲಿ ವೈಯಕ್ತಿಕ ಮತ್ತು ತಂಡಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಯುವಕ ಮತ್ತು ಯುವತಿಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಗುವುದಿಲ್ಲ.
ಸ್ಪರ್ಧೆಗಳು:
ತಂಡ ಸ್ಪರ್ಧೆಗಳಲ್ಲಿ ಜನಪದ ನೃತ್ಯ, ಜನಪದ ಗೀತೆ, ವೈಯಕ್ತಿಕ ಸ್ಪರ್ಧೆಗಳಲ್ಲಿ ಜನಪದ ನೃತ್ಯ ,ಜನಪದ ಗೀತೆ, ಕಥೆ ಬರೆಯುವುದು, ಭಿತ್ತಿ ಪತ್ರ ತಯಾರಿಕೆ, ಘೋಷಣೆ, ಛಾಯಾಚಿತ್ರಣ ಸ್ಪರ್ಧೆಗಳು ನಡೆಯಲಿದೆ.
ನಿಯಮಗಳು:
ಈ ಸ್ಪರ್ಧೆಯಲ್ಲಿ 18 ರಿಂದ 29 ವರ್ಷದೊಳಗಿನ ಯುವಕ ಯುವತಿಯವರು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಬಹುದು. ದಿನಾಂಕ.1.1.2024 ಕ್ಕೆ 29 ವರ್ಷದೊಳಗಿರಬೇಕು. ವಯಸ್ಸಿನ ಧೃಡಿಕರಣ ಪತ್ರ ಕಡ್ಡಾಯವಾಗಿ ತರಬೇಕು. ಪಕ್ಕ ವಾದ್ಯ ,ಧ್ವನಿ ಮುದ್ರಿತ ಕ್ಯಾಸೆಟ್ ಗಳು, ರಂಗ ಸಜ್ಜಿಕೆ, ವೇಷಭೂಷಣ,ವಾದ್ಯ ಪರಿಕರ ಇತ್ಯಾದಿ ಉಪಕರಣಗಳನ್ನು ಸ್ಪರ್ಧಿಗಳೇ ಸಿದ್ದಪಡಿಸಿಕೊಳ್ಳತ್ತಕ್ಕದ್ದು. ಯಾವುದೇ ಸ್ಪರ್ಧೆಯಲ್ಲಿ ಚಲನಚಿತ್ರ ಗೀತೆಗಳಿಗೆ ಅವಕಾಶವಿಲ್ಲ, ಕ್ಯಾಸೆಟ್ ಆಡಿಯೋ ರೆಕಾರ್ಡ್ ಗ ಬಳಸುವಂತಿಲ್ಲ. ಜಾನಪದ ನೃತ್ಯ , ಜಾನಪದ ಗೀತೆ ವಿಭಾಗದಲ್ಲಿ ಪೂರ್ತಿ ಭಾರತೀಯ/ಕರ್ನಾಟಕದ ಜನಪದದ ಪ್ರಕಾರ ಮಾತ್ರ ಇರಬೇಕು ಹಾಗೂ ಧ್ವನಿ ಮುದ್ರಿತ ಕ್ಯಾಸೆಟ್ ಆಡಿಯೋ ರೆಕಾರ್ಡಿಂಗ್ ಬಳಸುವಂತಿಲ್ಲ. ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಸತತ ಮೂರು ವರ್ಷ ಭಾಗವಹಿಸಿದ ಅಥವಾ ಒಂದು ಬಾರಿ ಪದಕ ವಿಜೇತ ಸ್ಪರ್ಧಿಗಳು ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುವಂತಿಲ್ಲ. ಸ್ಪರ್ಧಾಳುಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದು, ಬ್ಯಾಂಕ್ ಪಾಸ್ ಪುಸ್ತಕ ಕಡ್ಡಾಯವಾಗಿ ತರತಕ್ಕದ್ದು. ಸ್ಪರ್ಧೆಯಲ್ಲಿ ಭಾಗವಹಿಸುವವರು ನ.29 ರ ಒಳಗಾಗಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕು. [email protected] ಗೆ ಈ ಮೇಲ್ ಮಾಡಿ ಇಲ್ಲವಾದಲ್ಲಿ 9164502107 ಈ ನಂಬರಿಗೆ ಮಾಹಿತಿಗಾಗಿ ಕರೆ ಮಾಡಿ ತಮ್ಮ ತಂಡದ ಹೆಸರನ್ನು ಕಳುಹಿಸಿಕೊಡಬಹುದು. ಭಾಗವಹಿಸುವ ಸ್ಪರ್ಧಾಳುಗಳು ಡಿ. 2 ರಂದು ಬೆಳಿಗ್ಗೆ 9 ಗಂಟೆಯ ಒಳಗಾಗಿ ವರದಿ ಮಾಡಿಕೊಳ್ಳುವಂತೆ ಪುತ್ತೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಪ್ರಕಟಣೆ ನೀಡಿದ್ದಾರೆ.