ಒಳಮೊಗ್ರು ಗ್ರಾಪಂ ಅಧ್ಯಕ್ಷೆಯಿಂದ ಮನೆಮನೆ ತೆರಳಿ ಸ್ಚಚ್ಛತಾ ಅರಿವು

0

ಪುತ್ತೂರು: ಮನೆಮನೆಗೆ ತೆರಳಿ ಸ್ವಚ್ಛತೆಯ ಅರಿವು ಮೂಡಿಸುವ ಮೂಲಕ ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಗಮನ ಸೆಳೆದಿದ್ದಾರೆ. ಗ್ರಾಮದಲ್ಲಿ ಒಣ ತ್ಯಾಜ್ಯಗಳನ್ನು ಗ್ರಾ.ಪಂ ಸ್ವಚ್ಛ ವಾಹಿನಿಗೆ ಕೊಡದೇ ಸುಡುತ್ತಿರುವ ಬಗ್ಗೆ ವಿಷಯ ತಿಳಿದ ಅಧ್ಯಕ್ಷರು ಸ್ವಚ್ಛತಾ ಸೇನಾನಿಗಳೊಂದಿಗೆ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಸ್ವಚ್ಛತೆಯ ಅರಿವು ಮೂಡಿಸಿದರು. ಪ್ಲಾಸ್ಟಿಕ್ ಸುಡುವುದರಿಂದ ಆಗುವ ತೊಂದರೆಗಳ ಬಗ್ಗೆ ತಿಳಿಸಿದ ಅಧ್ಯಕ್ಷರು ಗ್ರಾ.ಪಂನಿಂದ ಕೊಟ್ಟ ಬ್ಯಾಗ್‌ಗಳಿಗೆ ಕಸವನ್ನು ಹಾಕಿ ಅದನ್ನು ಗ್ರಾಪಂ ಸ್ವಚ್ಛ ವಾಹಿನಿ ತಂಡಕ್ಕೆ ಕೊಡುವ ಮೂಲಕ ಸ್ವಚ್ಛತೆಗೆ ಕೈಜೋಡಿಸುಂತೆ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಸ್ವಚ್ಛತಾ ಸೇನಾನಿಗಳಾದ ಕಮಲಾಕ್ಷಿ, ಕವಿತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here