ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಕಾರ್ತಿಕ ಹುಣ್ಣಿಮೆ ಅಂಗವಾಗಿ ವರ್ಷಾವಧಿ ಮಹೋತ್ಸವವಾದ ಲಕ್ಷದೀಪೋತ್ಸವ ವಿಜೃಂಭಣೆಯಲ್ಲಿ ಜರಗಿತು.
ಶ್ರೀ ದೇವರ ಮೂರ್ತಿಯನ್ನು ವನಭೋಜನ ವೀರಾಂಜನೇಯ ದೇವಾಲಯಕ್ಕೆ ಕೊಂಡೊಯ್ದು ಅಲ್ಲಿ ಭಜನೆ, ದೀಪ ನಮಸ್ಕಾರ ಮಂಗಳಾರತಿ ನಡೆಸಿದ ಬಳಿಕ ಬೆಳ್ಳಿಯ ಪಲ್ಲಕ್ಕಿ ಉತ್ಸವದ ಮೂಲಕ ರಥಬೀದಿಯಲ್ಲಿ ಮೆರವಣಿಗೆ ನಡೆಯಿತು. ಈ ಸಂದರ್ಭ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ. ಗಣೇಶ ಶೆಣೈ, ಮೊಕ್ತೇಸರರಾದ ಯು. ನಾಗರಾಜ ಭಟ್, ಅನಂತರಾಯ್ ಕಿಣಿ, ಡಾ. ಯಂ. ರತ್ನಾಕರ ಶೆಣೈ, ದೇವಿದಾಸ ಭಟ್, ಸೇವಾಕರ್ತರಾದ ಕೆ.ಸುರೇಶ ಕಿಣಿ, ಕೆ.ರಾಮಚಂದ್ರ ನಾಯಕ್, ಭಜನಾ ಮಂಡಳಿ ಅಧ್ಯಕ್ಷ ಹರೀಶ ಪೈ ಪ್ರಮುಖರಾದ ಎಚ್. ವಾಸುದೇವ ಪ್ರಭು, ಕೆ.ಗಣೇಶ ಭಟ್, ಕರಾಯ ಗಣೇಶ ನಾಯಕ್, ವೈ ಅನಂತ ಶೆಣೈ, ಕೆ.ರಾಘವೇಂದ್ರ ನಾಯಕ್, ರಾಜೇಶ್ ಪೈ, ರಾಘವೇಂದ್ರ ಪ್ರಭು, ಗಿರಿಧರ್ ನಾಯಕ್, ವಿನಾಯಕ ಪೈ, ಎಸ್ ಶ್ರೀನಿವಾಸ್ ಭಟ್, ವಕೀಲ ರಮೇಶ ನಾಯಕ್, ನೀನಿ ಸಂತೋಷ ಕಾಮತ್, ಗಿರೀಶ್ ನಾಯಕ್, ಕೆ.ನರಸಿಂಹ ನಾಯಕ್, ಶ್ರೀಕಾಂತ್ ಪ್ರಭು, ನಂದಾವರ ಯೋಗೀಶ್ ಶೆಣೈ, ವೇಣೂರು ಸತೀಶ ಕಾಮತ್, ಪಣಕಜೆ ಪ್ರಸಾದ್ ಶೆಣೈ, ಶ್ರೀನಿವಾಸ ಪಡಿಯಾರ್, ಎಂ. ಸತ್ಯಪ್ರಸಾದ ಭಟ್, ವಿದ್ಯಾಧರ ಮಲ್ಯ, ಅಚ್ಚುತ ಪಡಿಯಾರ್, ವೈ. ವೆಂಕಟೇಶ ಶೆಣೈ, ಉಲ್ಲಾಸ್ ಭಟ್, ವಿನಾಯಕ ಪೈ ಮತ್ತಿತರರು ಉಪಸ್ಥಿತರಿದ್ದರು. ಪೂಜಾ ವಿಧಿ ವಿಧಾನವನ್ನು ರವೀಂದ್ರ ಭಟ್, ಸಂದೀಪ್ ಭಟ್, ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.