ಪುತ್ತೂರು: ದರ್ಬೆ ಹಿತ ಆಸ್ಪತ್ರೆಯ ಎದುರುಗಡೆ ಸಮ್ರಾಟ್ ಸೀ ಫುಡ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭಗೊಂಡಿತು. ಸಂಸ್ಥೆಯನ್ನು ಉದ್ಯಮಿ ವಾಮನ್ ಪೈ,ಹಾಗೂ ಸಂಸ್ಥೆಯ ಮಾಲಕರ ಹಿರಿಯ ಸಹೋದರ ಸರ್ವೊತ್ತಮ ಕಾಮತ್ ಹಾಗೂ ಪುತ್ರ ಅಕ್ಷಯ್ ಕಾಮತ್, ಕಟ್ಟಡ ಮಾಲಕರಾದ ಪಿ. ಭರತ್ ಪೈ ಹಾಗೂ ಜಯಶ್ರೀ ಆರ್.ಪೈ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಸಂಸ್ಥೆಯ ಯಶಸ್ಸಿಗೆ ಶುಭ ಹಾರೈಸಿದರು. ಸಂಸ್ಥೆಯ ಮಾಲಕರ ಇನ್ನೊರ್ವ ಸಹೋದರ ಹರೀಶ್ ಕಾಮತ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಸುಬ್ರಹ್ಮಣ್ಯ ಕಾಮತ್ ದಂಪತಿಗಳು ಅತಿಥಿಗಳನ್ನು ಬರಮಾಡಿಕೊಂಡು ಸಂದರ್ಭೋಚಿತವಾಗಿ ಮಾತನಾಡಿ ಸರ್ವರ ಸಹಕಾರವನ್ನು ಕೋರಿದರು.
ನಮ್ಮಲ್ಲಿ ಸೂಪ್ಸ್, ಚೈನೀಸ್ ಸ್ಟಾರ್ಟರ್ಸ್, ರೈಸ್, ನೂಡಲ್ಸ್ ತಂದೂರಿ ಸ್ಟಾರ್ಟರ್ಸ್, ಘೀ ರೋಸ್ಟ್, ತಂದೂರಿ ವೆಜ್ ಸ್ಟಾರ್ಟರ್ಸ್, ಫಿಶ್ ಫ್ರೈ, ಮೀಲ್ಸ್, ನಾರ್ತ್ ಕರೀಸ್, ಬಿರಿಯಾನಿ, ರೋಟಿ, ಸುಕ್ಕ, ಪುಳಿಮುಂಚಿ, ಗ್ರಿಲ್ ಶವರ್ಮ, ಮುಂತಾದ ವೆಜ್ ಮತ್ತು ನಾನ್ ವೆಜ್ ಟಂಗಳು ಶುಚಿರುಚಿಯಾಗಿ ಮಿತದರದಲ್ಲಿ ದೊರೆಯುತ್ತದೆ . ಜೊತೆಗೆ ಜ್ಯುಸ್, ಮಿಲ್ಕ್ ಶೇಕ್, ಐಸ್ಕ್ರೀಮ್ಗಳು ಲಭ್ಯವಿದೆ ಗ್ರಾಹಕರು ಇದರ ಸದುಪಯೋಗ ಪಡೆಯಬೇಕೆಂದರು.