ಪುತ್ತೂರು: ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ, ನಮ್ಮ ದೇಶದಲ್ಲಿ ಎಲ್ಲರೂ ಸಮಾನರು, ಇಲ್ಲಿ ಜಾತಿ, ಮತ ಧರ್ಮಗಳ ಭೇಧವಿಲ್ಲ, ಆದರೆ ಚುನಾವಣೆಯ ಸಂದರ್ಬದಲ್ಲಿ ದೇಶದಲ್ಲಿ ಕೋಮುಗಲಭೆಯನ್ನು ಸೃಷ್ಟಿಸುವ ಮೂಲಕ ಅಧಿಕಾರಕ್ಕೇರುವ ಕೆಲವೊಂದು ರಾಜಕೀಯ ಪಕ್ಷಗಳು ಮತಾಂದತೆಯನ್ನು ಭೋದಿಸುತ್ತದೆ, ಬೆಂಬಲಿಸುತ್ತದೆ ಇವರಿಗೆ ನಾವು ಅಧಿಕಾರ ಕೊಡಬಾರದು ಎಂದು ರಾಜ್ಯ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ ಹೇಳಿದರು.
ಶಾಸಕರ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಮಂಗಳೂರು ಸದಾ ಕೋಮು ವಿಚಾರಕ್ಕೆ ಸಂಬಂದಿಸಿದಂತೆ ಗಲಭೆಗಳು ನಡೆಯುತ್ತದೆ. ಈ ಮೊದಲು ಇಲ್ಲಿ ಕಾಂಗ್ರೆಸ್ ಶಕ್ತಿಯುತವಾಗಿತ್ತು ಆದರೆ ಮತಾಂಧತೆಯ ಕಾರಣಕ್ಕೆ ಇಲ್ಲಿ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಳ್ಳುವಂತಾಯಿತು. ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿಯುತವಾಗಲು ಅವರು ನಡೆಸುವ ಧರ್ಮಾಂದತೆಯೇ ಕಾರಣವಾಗಿದೆ. ಬಿಜೆಪಿಗೆ ಅಭಿವೃದ್ದಿ ಬೇಕಾಗಿಲ್ಲ ಅವರು ಜನರ ಮನಸ್ಸನ್ನು ಒಡೆಯುವ ಮೂಲಕ ಅಧಿಕಾರಕ್ಕೇರುವ ಪ್ರಯತ್ನವನ್ನು ಮಾಡುತ್ತಾರೆ ಅದನ್ನು ಕಾಂಗ್ರೆಸ್‌ನ ಜಾತ್ಯಾತೀತ ಮನಸ್ಸುಗಳು ತಡೆಯುವ ಕೆಲಸವನ್ನು ಮಾಡಬೇಕು ಎಂದು ಅವರು ಹೇಳಿದರು.
ಮುಂದಿನ ಲೋಕಸಬಾ ಚುನಾವಣೆಗೆ ಈಗಲೇ ತಯಾರಿ ಮಾಡಿಕೊಳ್ಳುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದರು. ಪಕ್ಷದ ಅಭ್ಯರ್ಥಿ ಯಾರೇ ಆದರೂ ಅವರನ್ನು ನಾವು ಗೆಲ್ಲಿಸುವ ಮೂಲಕ ಕರಾವಳಿ ಜಿಲ್ಲೆಯಲ್ಲಿ ಜಾತ್ಯಾತೀತತೆಯನ್ನು ಮತ್ತೆ ಮೆರೆಯುವಂತೆ ಮಾಡುವ ಕೆಲಸವನ್ನು ಕಾರ್ಯಕರ್ತರು ಒಟ್ಟು ಸೇರಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪುತ್ತೂರು ಶಾಸಕರಾದ ಅಶೋಕ್ ರೈ ಯವರನ್ನು ಗೆಲ್ಲಿಸುವ ಮೂಲಕ ಇಲ್ಲಿನ ಕಾಯಕರ್ತರು ಉತ್ತಮ ಕೆಲಸವನ್ನು ಮಾಡಿದ್ದಾರೆ. ಮುಂದಿನ ಐದು ವರ್ಷದಲ್ಲಿ ಪುತ್ತೂರು ಅಭಿವೃದ್ದಿಯಾಗಲಿದೆ. ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬವನ್ನು ತಲುಪುವಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ರೀತಿಯಲ್ಲಿ ಅಧಿಕಾರವನ್ನು ನಡೆಸುತ್ತಿದೆ. ಸರ್ವಜನಾಂಗದವರನ್ನು ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ರಾಜ್ಯದಲ್ಲಿ ರಾಜಧರ್ಮವನ್ನು ಪಾಲನೆ ಮಾಡುವ ಕೆಲಸ ವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಶೋಕ್ ರೈ , ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅದ್ಯಕ್ಷರಾದ ಎಂ ಎನ್ ರಾಜೇಂದ್ರ ಕುಮಾರ್, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ , ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ಸಚಿವರನ್ನು ಶಾಸಕರಾದ ಅಶೋಕ್ ರೈಯವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು