ಸವಣೂರು ಯೂತ್ ಫ್ರೆಂಡ್ಸ್ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಸವಣೂರು ಯೂತ್ ಫ್ರೆಂಡ್ಸ್ ಇದರ ಮಹಾಸಭೆ ಎಸ್.ವೈ.ಎಫ್ ಅಧ್ಯಕ್ಷ ಯಾಕೂಬ್ ಸವಣೂರು ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಾಹಿತಿ ಹೈದರ್ ಅಲಿ ಐವತ್ತೊಕ್ಲು, ಹಿರಿಯ ಉದ್ಯಮಿ ಅಬೂಬಕ್ಕರ್ ಹಾಜಿ ಆರ್ತಿಕೆರೆ, ಉದ್ಯಮಿ ಶರೀಫ್ ಸಿ.ಹೆಚ್, ಸವಣೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಂ ಎಚ್ ಹನೀಫ್, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಕಾರ್ಯದರ್ಶಿ ಅಶ್ರಫ್ ಬಿ.ಎಂ ಉಪಸ್ಥಿತರಿದ್ದರು.

ನಂತರ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಹೈದರ್ ಅಲಿ ಐವತ್ತೊಕ್ಲು ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶರೀಫ್ ಸಿ.ಹೆಚ್, ಉಪಾಧ್ಯಕ್ಷರಾಗಿ ಫಾರೂಕ್ ಬಿ.ಎಂ ಸ್ಟೋರ್, ಕಾರ್ಯದರ್ಶಿಯಾಗಿ ಸಫ್ವಾನ್ ಸವಣೂರು, ಜೊತೆ ಕಾರ್ಯದರ್ಶಿಯಾಗಿ ಹೈದರ್ ಎಸ್.ಆರ್, ಕೋಶಾಧಿಕಾರಿಯಾಗಿ ಸಹೀರ್ ರೋಯಲ್, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದೀಕ್ ಚಾಪಳ್ಳ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಾಕೂಬ್ ಸವಣೂರು, ಶಾಫಿ ಟೈಲರ್, ಖಾಲಿದ್ ಬಸ್ತಿ, ನಿಝಾರ್ ಅಜಾ, ಹಂಝತ್ ಆರಿಗಮಜಲು ಆಯ್ಕೆಗೊಂಡರು. ಗೌರವ ಸಲಹೆಗಾರರಾಗಿ ಅಬೂಬಕ್ಕರ್ ಹಾಜಿ ಆರ್ತಿಕೆರೆ, ಹನೀಫ್ ಎಂ ಎಚ್, ರಫೀಕ್ ಟಾಸ್ಕೋ, ಅಶ್ರಫ್ ಚಾಪಲ್ಲ, ಅಶ್ರಫ್ ಬಿ.ಎಂ ಆಯ್ಕೆಯಾದರು. ಸಫ್ವಾನ್ ಸವಣೂರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here