ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ಎಸ್ವೈಎಸ್) ಇದರ ಮೂವತ್ತನೇ ವರ್ಷಾಚರಣೆಯ ಪ್ರಚಾರಾರ್ಥ ಎಸ್ವೈಎಸ್ ಈಸ್ಟ್ ಜಿಲ್ಲಾ ಸಮಿತಿ ಆಯೋಜಿಸಿದ ‘ಯುವಜನೋತ್ಸವ’ ಕಾರ್ಯಕ್ರಮ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಅಧ್ಯಕ್ಷತೆಯಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಮುಹಮ್ಮದ್ ಸಅದಿ ವಳವೂರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಅಸ್ಸಯ್ಯಿದ್ ಇಸ್ಮಾಈಲ್ ತಂಙಳ್ ಉಜಿರೆ ಉದ್ಘಾಟಿಸಿದರು.
ಶಾಸಕ ಆಶೋಕ್ ಕುಮಾರ್ ರೈ ಮಾತನಾಡಿದರು. ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದ ಅಬ್ದುಲ್ ವಹ್ಹಾಬ್ ಸಖಾಫಿ ಮಂಬಾಡ್ ಮತ್ತು ಮೌಲಾನ ಎನ್ಕೆಎಂ ಶಾಫಿ ಸಅದಿಯವರು ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ವಿಷಯದಲ್ಲಿ ಮಾತನಾಡಿದರು.
ಜಂಇಯ್ಯತುಲ್ ಉಲಮಾ ನಾಯಕ ಮುಹಮ್ಮದಲಿ ಫೈಝಿ ಉಸ್ತಾದ್ ಸಂಪ್ಯ, ಖಾಸಿಂ ಮದನಿ ಕರಾಯ, ಹೈದರ್ ಮದನಿ ಕರಾಯ, ಎಸ್ವೈಎಸ್ ಯುವಜನೋತ್ಸವ ನಿರ್ವಹಣಾ ಸಮಿತಿ ಚೇರ್ಮೆನ್ ಸಯ್ಯಿದ್ ಸಾದಾತ್ ತಂಙಳ್, ಎಸ್ವೈಎಸ್ ರಾಜ್ಯಾಧ್ಯಕ್ಷ ಹಫೀಲ್ ಸಅದಿ ಕೊಡಗು, ಕೆಎಂಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಎಸ್ವೈಎಸ್ ರಾಜ್ಯ ಪ್ರ.ಕಾರ್ಯದರ್ಶಿ ಸ್ವಾದಿಕ್ ಮಲೆಬೆಟ್ಟು, ಎಸ್ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ ಎಂ ಸಿದ್ದೀಕ್ ಮೊಂಟುಗೋಳಿ, ಟೀಂ ಇಸಾಬ ರಾಜ್ಯ ಕಾರ್ಯದರ್ಶಿ ಖಲೀಲ್ ಮಾಲಿಕಿ, ಸ್ವಲಾಹುದ್ದೀನ್ ಸಖಾಫಿ, ಶರಫುದ್ದೀನ್ ತಂಙಳ್, ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು, ಪಿ ಕೆ ಮದನಿ ಉಸ್ತಾದ್ ಕೆಎಂಜೆ ಜಿಲ್ಲಾಧ್ಯಕ್ಷ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ನಿರ್ವಹಣಾ ಸಮಿತಿ ಕಾರ್ಯಾಧ್ಯಕ್ಷ ಕರೀಂ ಹಾಜಿ ಚೆನ್ನಾರ್, ಯೂಸುಫ್ ಹಾಜಿ ಕೈಕಾರ, ಎಸ್ ಎಂ ಎ ಜಿಲ್ಲಾ ಕೋಶಾಧಿಕಾರಿ ಯೂಸುಫ್ ಗೌಸಿಯ ಸಾಜ, ಅಶ್ರಫ್ ಕಿನಾರ ಮುಫತ್ತಿಸ್ ಹನೀಫ್ ಮಿಸ್ಬಾಹಿ, ಕೆಎಂಜೆ ನಾಯಕರುಗಳಾದ ಮಜೂರು ಅಬೂಬಕರ್ ಸಅದಿ, ಖಾಸಿಂ ಪದ್ಮುಂಜ, ಹಮೀದ್ ಸಖಾಫಿ ಕೊಡುಂಗೈ, ಅಬ್ಬಾಸ್ ಮದನಿ ಬಂಡಾಡಿ, ಜಿ ಎಂ ಕುಂಞಿ, ಇಸ್ಮಾಈಲ್ ಮಾಸ್ಟರ್, ಇಕ್ಬಾಲ್ ಬಪ್ಪಳಿಗೆ, ಯೂಸುಫ್ ಸಯೀದ್, ಹಮೀದ್ ಬೀಜಕೊಚ್ಚಿ, ಎಸ್ಸೆಸ್ಸೆಫ್ ರಾಜ್ಯ ನಾಯಕ ಮುಹಮ್ಮದಲಿ ತುರ್ಕಳಿಕೆ, ಎಸ್ಸೆಸ್ಸೆಫ್ ಈಸ್ಟ್ ಜಿಲ್ಲಾಧ್ಯಕ್ಷ ಮುಹಮ್ಮದ್ ಮಿಸ್ಬಾಹಿ, ಅಬ್ಬಾಸ್ ಬಟ್ಲಡ್ಕ, ಯುವಜನೋತ್ಸವ ಸ್ಥಳೀಯ ಸ್ವಾಗತ ಸಮಿತಿ ಚೇರ್ಮೆನ್ ಎಸ್ಎಂಕೆ ಅಶ್ರಫ್, ಕನ್ವೀನರ್ ಅತಾವುಲ್ಲಾ ಹಿಮಮಿ, ಕೋಶಾಧಿಕಾರಿ ಉಮರ್ ತಾಜ್, ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಶರೀಫ್ ಸಖಾಫಿ ಉಜಿರೆಬೆಟ್ಟು, ಉಸ್ಮಾನ್ ಸೋಕಿಲ, ಕಲಂದರ್ ಪದ್ಮುಂಜ, ಎನ್.ಎಂ ಶರೀಫ್ ಸಖಾಫಿ ನೆಕ್ಕಿಲ್ ಜಿಲ್ಲಾ ಸೋಷಿಯಲ್ ಕಾರ್ಯದರ್ಶಿ ಅಶ್ರಫ್ ಸಖಾಫಿ ಮೂಡಡ್ಕ, ದಅವಾ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ, ಸಾಂತ್ವನ ಕಾರ್ಯದರ್ಶಿ ಮುಸ್ತಫಾ ಕೋಡಪದವು, ಸಂಘಟನಾ ಕಾರ್ಯದರ್ಶಿ ಹಮೀದ್ ಕೊಯಿಲ, ಕೋಶಾಧಿಕಾರಿ ಶಂಸುದ್ದೀನ್ ಝಂಝಂ, ಮಾದ್ಯಮ ಕಾರ್ಯದರ್ಶಿ ಅಬೂಶಝ, ಉಮರುಲ್ ಫಾರೂಕ್ ಸಖಾಫಿ, ಕಾಸಿಂ ಮುಸ್ಲಿಯಾರ್ ಉಜಿರೆ, ಅಬೂಬಕರ್ ಫಾಳಿಲಿ ಬೆಳಂದೂರು, ಅಬೂಬಕರ್ ಸಿದ್ದೀಕ್ ಮಿಸ್ಬಾಹಿ ವಿಟ್ಲ, ನಾಸರ್ ಸಅದಿ, ಹನೀಫ್ ಸಖಾಫಿ ಬೆಳ್ಳಾರೆ ಉಪಸ್ಥಿತರಿದ್ದರು.
ಸಮ್ಮೇಳನಕ್ಕೆ ಮುಂಚಿತವಾಗಿ ಸುನ್ನೀ ಸಂಘ ಕುಟುಂಬದ ಸಂದೇಶ ಜಾಥ ನಡೆಯಿತು. ಉಪ್ಪಿನಂಗಡಿ ಎಸ್ವೈಎಸ್ ಝೋನ್ ಸಾಂತ್ವನ ಕೇಂದ್ರವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ಎಸ್ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ ಸ್ವಾಗತಿಸಿ, ನಿರ್ವಹಣಾ ಸಮಿತಿ ಕನ್ವೀನರ್ ಸಲೀಂ ಕನ್ಯಾಡಿ ವಂದಿಸಿದರು. ಜಿಲ್ಲಾ ಉಪಾಧ್ಯಕ್ಷ ಹಂಝ ಮದನಿ ಉಜಿರೆ ಕಾರ್ಯಕ್ರಮ ನಿರೂಪಿಸಿದರು.