ಮಾಣಿ ಬಾಲವಿಕಾಸ ಆಂಗ್ಲ‌ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

0

ವಿಟ್ಲ: ಮಾಣಿ ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಾರ್ಷಿಕ ಕ್ರೀಡಾಕೂಟಕ್ಕೆ ಡಿ. 8 ರಂದು ಚಾಲನೆ ನೀಡಲಾಯಿತು. ಕಲ್ಲಡ್ಕ ಮ್ಯೂಸಿಯಂನ ಸಂಸ್ಥಾಪಕ, ಬಾಲವಿಕಾಸ ಶಾಲೆಯ ಹಿರಿಯ ವಿದ್ಯಾರ್ಥಿ ಮೊಹಮ್ಮದ್ ಯಾಸಿರ್ ರವರು ಕ್ರೀಡಾಕೂಟವನ್ನು ಉದ್ಘಾಟಿಸಿದರು.


ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ರೀಡೋತ್ಸವದಲ್ಲಿ ಕ್ರೀಡಾ ಜ್ಯೋತಿಯ ಆಗಮನ ಹಾಗೂ ಆಕರ್ಷಣೀಯ ಪಥಸಂಚಲನವು ಎಲ್ಲರ ಗಮನ ಸೆಳೆಯಿತು.


ಕಾರ್ಯಕ್ರಮದಲ್ಲಿ ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ. ಶೆಟ್ಟಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ದಿನಕರ್ ಪೂಜಾರಿ ಹಾಗೂ ವಿಶಾಲಾಕ್ಷಿ ಎಚ್. ಆಳ್ವ ಸಹಕರಿಸಿದರು. ಶಿಕ್ಷಕಿ ಮೋಹಿನಿ ಎ. ರೈ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ರಶ್ಮಿ ಫೆರ್ನಾಂಡಿಸ್ ಹಾಗೂ ಯಜ್ಞೇಶ್ವರಿ ಎನ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here