ಪುತ್ತೂರು: ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆ ಪ್ರಯುಕ್ತ ಶೇಖಮಲೆ ಕಾಲೊನಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಮಹಿಳಾ ಒಕ್ಕೂಟ ಶೇಕಮಲೆ ಹಾಗೂ ಸ್ವಸ್ತಿಕ್ ಮಿಷನ್ ವರ್ಕರ್ಸ್ ಜಂಟಿ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಕರ್ನಾಟಕ ದಸಂಸ ಜಿಲ್ಲಾಸಂಚಾಲಕರಾದ ಆನಂದ ಬೆಳ್ಳಾರೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ದಲಿತ ಸಂಘಟನೆ ಪ್ರಮುಖರಾದ ಕೇಶವ ಬಿಎಸ್, ಅರಿಯಡ್ಕ ಗ್ರಾಮ ದಸಂಸ ಸಂಚಾಲಕ ಹರೀಶ್ ಬಿಕೆ, ಕೋಶಾಧಿಕಾರಿ ಸತೀಶ್ ಎಸ್, ಮಹಿಳಾ ಒಕ್ಕೂಟದ ಪದಾಧಿಜಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ನಾರಾಯಣ ಎಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.