ಪುತ್ತೂರು ಕುಂಬಾರರ ಗುಡಿ ಕೈಗಾರಕಾ ಸಹಕಾರ ಸಂಘದಿಂದ ಬೆಳ್ತಂಗಡಿ ಕಳಂಜದಲ್ಲಿ ಕುಂಬಾರಿಕೆ ವಿನ್ಯಾಸ ಅಭಿವೃದ್ಧಿ ಕಾರ್ಯಾಗಾರ

0

ಪುತ್ತೂರು: ಕರಕುಶಲ ಅಭಿವೃದ್ಧಿ ಮಂತ್ರಾಲಯ ಹಾಗು ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಬೆಳ್ತಂಗಡಿಯ ಕಳಂಜ ಗ್ರಾಮದ ಕಾಯರ‍್ತಡ್ಕ ಎಂಬಲ್ಲಿ ಕುಂಬಾರಿಕೆಯಲ್ಲಿ ವಿನ್ಯಾಸ ಅಭಿವೃದ್ಧಿ ಕಾರ‍್ಯಾಗಾರ ಆರಂಭಿಸಲಾಯಿತು.


ಕಳಂಜ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷ ಮಂಜುನಾಥ ಗೌಡ ಅವರು ಕಾರ‍್ಯಕ್ರಮವನ್ನು ಉದ್ಘಾಟಿಸಿ ಕಳಂಜ ಗ್ರಾಮದಲ್ಲಿ ನಡೆಯುತ್ತಿರುವ ತರಬೇತಿ ಇಲ್ಲಿಯ ಕುಶಲಕರ್ಮಿಗಳಿಗೆ ಪ್ರಯೋಜನವಾಗುತ್ತಿದೆ, ಎಲ್ಲರೂ ಹೆಚ್ಚಿನ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಉಪಾಧ್ಯಕ್ಷ ದಾಮೋದರ್‌ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಈ ತರಬೇತಿಯನ್ನು ಈ ಭಾಗದಲ್ಲಿ ನಡೆಸಲು ನಮ್ಮ ಸಹಕಾರ ಸಂಘದಿಂದ ಬಹಳಷ್ಟು ಪ್ರಯತ್ನ ಮಾಡಿದೆ. ಕರಕುಶಲಕರ್ಮಿಗಳಿಗೆ ಉತ್ತಮ ರೀತಿಯ ಸೌಲಭ್ಯ ಹಾಗೂ ಸಹಾಯವನ್ನು ಒದಗಿಸಲು ಸಹಕಾರ ಸಂಘ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ, ಕುಶಲ ಕರ್ಮಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕರಕುಶಲ ಅಭಿವೃದ್ಧಿ ಅಧಿಕಾರಿ ಹಪ್ಲಹಸನ್ ರವರು ಕೇಂದ್ರಸರಕಾರದ ಕರಕುಶಲ ಮಂತ್ರಾಲಯದಿಂದ ಕುಶಲಕರ್ಮಿಗಳಿಗೆ ದೊರೆಯುವ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಡಿಸೈನರ್ ಕುಮಾರಿ ಜಿಪ್ಸ ಚಂದ್ರನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘದ ನಿರ್ದೇಶಕರಾದ ಗಣೇಶ್ ಕುಲಾಲ್ ಪಿ ಮತ್ತು ಪದ್ಮಕುಮಾರ್ ಹೆಚ್ ರವರು ಭಾಗವಹಿಸಿದ್ದರು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜನಾರ್ಧನ ಮೂಲ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ರಮೇಶ್ ರವರು ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here