ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿವೇಕಾನಂದ ಬಿ.ಎಡ್ ಕಾಲೇಜು , ರೇಡಿಯೋ ಪಾಂಚಜನ್ಯ 90.80ಎಫ್. ಎಂ. ಮತ್ತು ವಿದ್ಯಾಭಾರತೀ ಉಚ್ಚ ಶಿಕ್ಷಾ ಸಂಸ್ಥಾನ್- ಕರ್ನಾಟಕ ಇದರ ಸಹಯೋಗದಲ್ಲಿ ಡಿ. 27ರಂದು “ಭಾರತೀಯ ಭಾಷಾ ಉತ್ಸವದ” ಪ್ರಯುಕ್ತ ಪುತ್ತೂರಿನ ತೆಂಕಿಲದಲ್ಲಿ ಇರುವ ವಿವೇಕಾನಂದ ಬಿ. ಎಡ್ ಕಾಲೇಜಿನಲ್ಲಿ ಬಹುಭಾಷಾ ಕವಿ ಗೋಷ್ಠಿ ನಡೆಯಲಿದೆ.
ಈ ಕವಿಗೋಷ್ಠಿಯು ಸಾರ್ವಜನಿಕ ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ನಡೆಯಲಿದ್ದು ಗೋಷ್ಠಿಯಲ್ಲಿ ಕನ್ನಡ, ತುಳು, ಕೊಂಕಣಿ, ಅರೆ ಭಾಷೆ, ಶಿವಳ್ಳಿ, ತುಳು,ಕೊಡವ,ಹವ್ಯಕ ಕನ್ನಡ,ಹಿಂದಿ, ಮಲಯಾಳಂ, ಬ್ಯಾರಿ, ತಮಿಳ್, ತೆಲುಗು, ಮರಾಠಿ ಮಾತ್ರವಲ್ಲದೆ ಭಾರತದಲ್ಲಿ ಪ್ರಚಲಿತದಲ್ಲಿರುವ ಯಾವುದೇ ಭಾಷೆಯ ಕವನಗಳನ್ನು ಪ್ರಸ್ತುತಪಡಿಸಲು ಅವಕಾಶವಿದೆ.
ಆಸಕ್ತರು ಡಿಸೆಂಬರ್ 25ರ ಮೊದಲಾಗಿ ಕಾರ್ಯಕ್ರಮದ ಸಂಯೋಜಕರಾದ ಶೋಭಿತ ಸತೀಶ್ ಅವರ ದೂರವಾಣಿ ಸಂಖ್ಯೆ 89719 38355ಗೆ ತಮ್ಮ ಹೆಸರು ಹಾಗೂ ಪ್ರಸ್ತುತಪಡಿಸುವ ಕವನದ ಭಾಷೆಯನ್ನು ವಾಟ್ಸಾಪ್ ಮೂಲಕ ತಿಳಿಸಬೇಕಾಗಿ ಕ. ಸಾ.ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ.