ಸುಬ್ರಹ್ಮಣ್ಯ: ಕಡಬ ತಾಲೂಕಿನ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 10ರಂದು ಮೊದಲ್ಗೊಂಡು ಡಿ.24ರ ವರೆಗೆ ಚಂಪಾಷಷ್ಠಿ ಮಹೋತ್ಸವ, ವಾರ್ಷಿಕ ಉತ್ಸವಾದಿಗಳು ಜರಗಲಿವೆ.
ಡಿ. 10ರಂದು ಕೊಪ್ಪರಿಗೆ ಏರುವ ಮೂಲಕ ಚಂಪಾಷಷ್ಠಿ ಮಹೋತ್ಸವ ಆರಂಭಗೊಂಡಿದ್ದು,ಡಿ.15ರಂದು ಮಯೂರ ವಾಹನೋತ್ಸವ ,ಡಿ. 16ರಂದು ರಾತ್ರಿ ಹೂವಿನ ತೇರಿನ ಉತ್ಸವ, ಡಿ. 17ರಂದು ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ, ಡಿ. 18ರಂದು ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವ, ಡಿ. 19ರಂದು ಅವಭೃಥ ಉತ್ಸವ, ನೌಕಾವಿಹಾರ, ಡಿ. 24ರಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ಜರಗಲಿದೆ.2024ರ ಜ. 16ರಂದು ಕಿರುಷಷ್ಠಿ ಮಹೋತ್ಸವ ಜರಗಲಿದೆ.
ಸರ್ಪಸಂಸ್ಕಾರ ಸೇವೆ ಇಲ್ಲ
ಚಂಪಾಷಷ್ಠಿ ಮಹೋತ್ಸವ ನಿಮಿತ್ತ ಡಿ. 8ರಿಂದ 24ರ ವರೆಗೆ ಸರ್ಪ ಸಂಸ್ಕಾರ ಸೇವೆ, ಡಿ. 10ರಿಂದ 24ರ ವರೆಗೆ ಸಾಯಂಕಾಲದ ಆಶ್ಲೇಷಾ ಬಲಿ ಸೇವೆ ನೆರವೇರುವುದಿಲ್ಲ.
ಡಿ. 16ರ ಚೌತಿ, ಡಿ. 17ರ ಪಂಚಮಿ ದಿನಗಳಲ್ಲಿ ಭಕ್ತರ ಪ್ರಾರ್ಥನೆ ಸೇವೆ ರಾತ್ರಿ ಹೊತ್ತಿನಲ್ಲಿ ಇರುವುದಿಲ್ಲ. ಡಿ. 18ರ ಚಂಪಾಷಷ್ಠಿಯಂದು ಮಧ್ಯಾಹ್ನ ಪ್ರಾರ್ಥನೆ, ಡಿ. 18ರಂದು ಚಂಪಾಷಷ್ಠಿ ದಿನ ಆಶ್ಲೇಷಾ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ. ಡಿ. 12ರ ಲಕ್ಷದೀಪೋತ್ಸವ), ಡಿ. 16ರಂದು (ಚೌತಿ), ಡಿ. 17ರಂದು (ಪಂಚಮಿ), ಡಿ. 18ರಂದು (ಚಂಪಾಷಷ್ಠಿ) ಮತ್ತು ಡಿ. 27ರಂದು ಪಂಚಾಮೃತ ಮಹಾಭಿಷೇಕ ಸೇವೆ ನೆರವೇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.