ಸುದಾನ ಶಾಲೆಯಲ್ಲಿ ಜ್ಯೂ.ವಿಭಾಗದ ವಾರ್ಷಿಕೋತ್ಸವ

0

ಪ್ರಕೃತಿ ಸೌಂದರ್ಯ ಸುದಾನದ ಹೆಚ್ಚುಗಾರಿಕೆಯಾಗಿದೆ-ಡಾ.ಸಂಜನಾ ಶೆಟ್ಟಿ

ಪುತ್ತೂರು: ಕಲಿಕೆ ಜೊತೆ ಜೊತೆಗೆ ಮನೋರಂಜನೆ ಹೀಗೆ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ವಿಷಯಾಧಾರಿತ ಧ್ಯೇಯ ವಾಕ್ಯವನ್ನಿಟ್ಟುಕೊಂಡು ವಾರ್ಷಿಕೋತ್ಸವ ಆಚರಿಸುತ್ತಾ ಬಂದಿರುವುದು ಶ್ಲಾಘನೀಯ. ಅಲ್ಲದೆ ಪ್ರಕೃತಿ ಸೌಂದರ್ಯ ಎನ್ನುವುದು ಸುದಾನ ಶಾಲೆಯ ಹೆಚ್ಚುಗಾರಿಕೆಯಾಗಿದೆ ಎಂದು ಶಾಲಾ ಹಿರಿಯ ವಿದ್ಯಾರ್ಥಿ, ಎಂಬಿಬಿಎಸ್ ಪದವೀಧರೆ ಡಾ.ಸಂಜನಾ ಶೆಟ್ಟಿ ಹೇಳಿದರು.
ನೆಹರುನಗರದ ಸುದಾನ ವಸತಿಯುತ ಶಾಲೆಯಲ್ಲಿ ನಡೆಯುವ ಮೂರು ದಿನಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಡಿ.22ರಂದು ಎರಡನೇ ದಿನ ನಡೆದ ಶಾಲೆಯ ಜ್ಯೂನಿಯರ್ ವಿಭಾಗದ ವಾರ್ಷಿಕೋತ್ಸವದಲ್ಲಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯಲ್ಲಿ ಶಿಕ್ಷಕರು ಮಕ್ಕಳನ್ನು ಸಮಾಜದ ಪ್ರಜ್ಞಾವಂತ ನಾಗರಿಕರನ್ನಾಗಿ ರೂಪುಗೊಳಿಸುತ್ತಾರೆ. ಸುದಾನ ಶಾಲೆಯಲ್ಲಿ ಹನ್ನೆರಡು ವರ್ಷ ವಿದ್ಯಾಭ್ಯಾಸ ಮಾಡಿದ್ದೇನೆ ಎನ್ನುವ ಹೆಮ್ಮೆಯಿದೆ ನನಗೆ. ಮುಂದಿನ ದಿನಗಳಲ್ಲಿ ಸುದಾನ ಶಾಲೆಯು ಮತ್ತಷ್ಟು ಸಾಧನೆಗಳನ್ನು ಮಾಡುವ ಮೂಲಕ ಸಮಾಜದಲ್ಲಿ ಗುರುತಿಸುವಂತಾಗಲಿ ಎಂದರು.

ಕಲಿಕೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಾಧನೆ ಮಾಡುವವರಾಗಿ-ಅವನಿ ಬೆಳ್ಳಾರೆ
ಮುಖ್ಯ ಅತಿಥಿ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅವನಿ ಬೆಳ್ಳಾರೆ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಾವೆಲ್ಲಾ ಚಿಗುರು ಆಗಿದ್ದೇವೆ. ವಾರ್ಷಿಕೋತ್ಸವ ಎನ್ನುವುದು ಪ್ರತಿ ಮಗುವಿಗೆ ತನ್ನ ಪ್ರತಿಭೆ ತೋರ್ಪಡಿಸುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಾಧನೆ ಮಾಡುವವರಾಗಿ. ಸುದಾನ ಶಾಲೆಯು ಸಾಧನೆಗೆ ಪೂರಕವಾದ ವಾತಾವರಣ ಹೊಂದಿದ ಶಾಲೆಯಾಗಿದೆ ಎಂದರು.

ವಿಶೇಷ ಸಾಧಕರಿಗೆ ಅಭಿನಂದನೆ
ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರಾದ ಅಮೋಘ್ ಕೆ, ಅದ್ವಿಕ, ಪ್ರತು ಕೆ, ಸಂಭ್ರಮ್ ಎನ್.ವಿ, ವೈಷ್ಣವಿ ಬಿ, ಸಾಧ್ವಿ ಎಂ.ಡಿ, ಸಮ್ಸೃತಾ ಡಿ.ಜಿ, ಮಿತ್ರ, ದಿಯಾ ಎಚ್.ಸಿ ಮಾಲ್, ಫಾತಿಮಾ ಅರುಷ್, ಅದಿತಿ ಸಿ.ಪಿ, ಫಾತಿಮ ಅನ್ಫಾ, ಪ್ರಾಪ್ತಿ ಬಿ.ಜೆ, ಫಾತಿಮ ತಸ್ನಾ, ನಿರುಪಮಾ ಎ.ಆರ್, ಅನ್ವೇಷ್ ಪರ್ಪಲ, ವಿಹಾನ್ ರಾಮ್, ಅಯುಷ್ ವಿ.ರೈ, ಮೊಹಮದ್ ಅರ್ಫಾಜ್, ಮೊಹಮದ್ ಮುಸ್ತಾಫ, ಪ್ರಮಿತ್ ಶೆಟ್ಟಿ, ವಿಶ್ವಾಸ್ ನಾರಾಯಣ ಭಟ್, ಪ್ರದ್ಯುಮ್ನ ನಾಯಕ್, ಪ್ರದ್ಯುಮ್ನ ಟಿ.ಎಚ್, ಮೊಹಮದ್ ಮಿಯಾಜ್, ಶ್ರೀಶಾಂತ್, ಅನೀಶ್, ಜೆನಿಫರ್ ಮ್ಯಾಥ್ಯೂ, ಲಶಿಕಾ ಪಿ.ಶೆಟ್ಟಿ, ಯಶಿತ ಪಿ.ಜೆ, ಸಾನ್ವಿ ಪಿ.ಕೆ, ಇಶಾಂತ್ ಕೆ.ಎಸ್, ಶೌರ್ಯ ಎನ್.ಆರ್, ಮೊಹಮದ್ ಅರಮ್ ಶದಾಬ್, ಅರುಷಿ ವಿ.ಆರ್, ಲಾವ್ಯ ಬಿ.ಶೆಟ್ಟಿ, ಅಕ್ಷರಾ ಕೆ.ಸಿ, ಸಾನ್ವಿ ಡಿ, ನಿಶಾ ಟಿ.ಎನ್, ದತ್ತಚರಣ ಸಿ.ಎಸ್, ಶ್ರೀರಾಮ್ ಪಿ.ಬಿ, ಅನಿಲ್ ಕೃಷ್ಣ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಮೊಹಮದ್ ರಯಿಫ್ ಖಾನ್, ಪ್ರಣೀತ್ ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲಾ ಸಂಚಾಲಕ ರೆ|ವಿಜಯ ಹಾರ್ವಿನ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು, ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಆಸ್ಕರ್ ಆನಂದ್, ಮುಖ್ಯ ಶಿಕ್ಷಕಿ ಶೋಭಾ ನಾಗಾರಾಜ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಸ್ವಪ್ನಾ ಸೂರಜ್ ನಾಯರ್, ಶಾಲಾ ಉಪ ನಾಯಕಿ ಜಿಯಾ ಸ್ವೀಡಲ್ ಲಸ್ರಾದೊ, ಶಾಲಾ ವಿದ್ಯಾರ್ಥಿ ಕಾರ್ಯದರ್ಶಿ ಹನಿಕಾ ಯು ಉಪಸ್ಥಿತರಿದ್ದರು. ಶಾಲಾ ನಾಯಕ ವಿಶಾಲ್ ಬಿ ಸ್ವಾಗತಿಸಿ, ಮಂತ್ರಿಮಂಡಲದ ವಿಪಕ್ಷ ನಾಯಕಿ ಶಾಜ್ಮಾ ಸುಮಯ್ಯ ವಂದಿಸಿದರು. ಪ್ರೌಢಶಾಲಾ ವಿಭಾಗದ ಸಂಯೋಜಕಿ ಪ್ರತಿಮಾ ಸಾಧಕರ ಪಟ್ಟಿ ವಾಚಿಸಿದರು. ಶಿಕ್ಷಕಿಯರಾದ ಆಶಾಲತಾ ಹಾಗೂ ನಿಶ್ಮಿತಾರವರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯ ನೆರವೇರಿತು.

ಇಂದು ಶಾಲೆಯಲ್ಲಿ..
ಡಿ.23ರಂದು ಶಾಲೆಯ ಪ್ರೌಢಶಾಲಾ ವಿಭಾಗದ ಹಾಗೂ ಸುದಾನ ಹಿರಿಯ ವಿದ್ಯಾರ್ಥಿಗಳ ವಾರ್ಷಿಕೋತ್ಸವವು ನಡೆಯಲಿದ್ದು, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಸಾಹಿತಿ ಡಾ.ನರೇಂದ್ರ ರೈ ದೇರ್ಲರವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸುಶಾಂತ್ ಹಾರ್ವಿನ್, ಡಾ.ವಿಖ್ಯಾತ್ ನಾರಾಯಣ್, ಸತ್ಯಾತ್ಮ, ಹರ್ಷಿತ್ ಎಂ.ಬಿ ಭಾಗವಹಿಸಲಿದ್ದಾರೆ. . ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.

ಆಕರ್ಷಿಸಿದ ಪಿಲಿ ಡ್ಯಾನ್ಸ್..
ಸಭಾ ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಗಣ್ಯರನ್ನು ಶಾಲಾ ವಿದ್ಯಾರ್ಥಿನಿಯರು ಪೂರ್ಣಕುಂಭದ ಸ್ವಾಗತದೊಂದಿಗೆ ವೇದಿಕೆಗೆ ಕರೆ ತರಲಾಯಿತು. ಬಳಿಕ ತುಳುನಾಡಿನ ಪ್ರಖ್ಯಾತ ನೃತ್ಯ ಎನಿಸಿದ ‘ಪಿಲಿ ಡ್ಯಾನ್ಸ್’ ವಿದ್ಯಾರ್ಥಿಗಳಿಂದ ಆಕರ್ಷಕವಾದ ಹೆಜ್ಜೆ ಹಾಕುವ ಮೂಲಕ ಪ್ರದರ್ಶಿಸಿದರು.

LEAVE A REPLY

Please enter your comment!
Please enter your name here