ಪುತ್ತೂರು:ಕುರಿಯ ಗ್ರಾಮದ ಅಮ್ಮುಂಜ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವಗಳಿಗೆ ಚಾಲನೆ ದೊರೆತಿದ್ದು ಡಿ.25ರಂದು ಸಂಜೆ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆಯು ನಡೆಯಿತು.
ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಬಳಿಯಿಂದ ಹೊರಟ ಹೊರೆಕಾಣಿಕೆ ಮೆರವಣಿಗೆಗೆ ಸಂಪ್ಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಕುಕ್ಕಾಡಿ ಪ್ರೀತಂ ಪುತ್ತೂರಾಯ ಹಾಗೂ ಹಿರಿಯರಾದ ಸುಬ್ರಾಯ ಅಂಗಿಂತಾಯ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ಮೆರವಣಿಗೆಯ ಮೊಟ್ಟೆತ್ತಡ್ಕ ಮುಖ್ಯರಸ್ತೆಯ ಮೂಲಕ ಸಾಗಿ ದೇವಸ್ಥಾನದಲ್ಲಿ ಸಮಾಪನಗೊಂಡಿತು. ರಾತ್ರಿ ದೇವಸ್ಥಾನದಲ್ಲಿ ಶ್ರೀದೇವತಾ ಪ್ರಾರ್ಥನೆ ಹಾಗೂ ಉಗ್ರಾಣಪೂಜೆ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಣ್ಣ ನಾಯ್ಕ, ಸದಸ್ಯರಾದ ಸಂತೋಷ್ ರೈ ಸಂಪ್ಯದಮೂಲೆ, ರೇಖನಾಥ ರೈ ಸಂಪ್ಯದಮೂಲೆ, ರಮೇಶ್ ಅಂಗಿಂತ್ತಾಯ, ವಿಠಲ ಗೌಡ ಪಾಲಿಂಜೆ, ಮಾಲಿನಿ ಹೆಗ್ಡೆ ಪಾಲಿಂಜೆ, ಮಾಜಿ ಅಧ್ಯಕ್ಷ ಜಯರಾಮ ರೈ ನುಳಿಯಾಲು, ಅರ್ಚಕ ಶ್ರವಣ್ ಭಟ್, ಪ್ರಮುಖರಾದ ರಾಜೇಶ್ ರೈ ಸಂಪ್ಯದಮೂಲೆ, ಜಯರಾಮ ಹೆಗ್ಡೆ, ಪ್ರಶಾಂತ್ ಆಚಾರ್ಯ ಮಾದೇರಿ, ಪೂರ್ಣಿಮಾ ಅಮ್ಮುಂಜ, ಹೊನ್ನಪ್ಪ ನಾಯ್ಕ, ಜಗನ್ನಾಥ ಶೆಟ್ಟಿ ಸಂಪ್ಯದಮೂಲೆ, ರಜಿನೀಶ್ ಮಣಿಯಾಣಿ, ಜಯಶಂಕರ ರೈ ಸಂಪ್ಯದಮೂಲೆ, ವಿಶ್ವಜಿತ್ ಅಮ್ಮುಂಜೆ, ವಿಶ್ವನಾಥ ನಾಯ್ಕ ಪಾಲಿಂಜೆ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.
ಜಾತ್ರೋತ್ಸವದಲ್ಲಿ ಜ.6ರಂದು ಅರ್ಧ ಏಕಾಹ ಭಜನೆ, ಆಶ್ಲೇಷ ಬಲಿ, ನಾಗತಂಬಿಲ, ಮಹಾವಿಷ್ಣುಮೂರ್ತಿ ದೇವರಿಗೆ ಪವಮಾನಾಭಿಷೇಕ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ, ಸಂಜೆ ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಚಾಮುಂಡೇಶ್ವರಿ ದೇವಸ್ಥಾನದ ತನಕ ದೇವರ ಪೇಟೆ ಸವಾರಿ, ಡಿ.೨೭ರಂದು ಸಂಜೆ ದುರ್ಗಾಪೂಜೆ, ಕಾರ್ತಿಕ ಪೂಜೆ ನಡೆದು ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.