ಸವಿ ಎಲೆಕ್ಟ್ರಾನಿಕ್ಸ್, ಸವಿ ಫೂಟ್‌ವೇರ್ ಹಾಗೂ ಪ್ರಗತಿ ಎಲೆಕ್ಟ್ರಿಕಲ್ಸ್ ಮತ್ತು ರೆಫ್ರಿಜರೇಷನ್‌ಗಳ ಮಳಿಗೆಗಳ ಶುಭಾರಂಭ

0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿರುವ ಮಾಲೀಕುದ್ದೀನಾರ್ ಕಾಂಪ್ಲೆಕ್ಸ್‌ನಲ್ಲಿ ಸವಿ ಎಲೆಕ್ಟ್ರಾನಿಕ್ಸ್, ಸವಿ ಫೂಟ್‌ವೇರ್ ಹಾಗೂ ಪ್ರಗತಿ ಎಲೆಕ್ಟ್ರಿಕಲ್ಸ್ ಮತ್ತು ರೆಫ್ರಿಜರೇಷನ್‌ಗಳ ಮಳಿಗೆಯು ಡಿ.25ರಂದು ಶುಭಾರಂಭಗೊಂಡಿತು.


ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ಮಳಿಗೆಗಳನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯ ಅಬ್ದುರ್ರಝಾಕ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವಾಧ್ಯಕ್ಷ ಕರುಣಾಕರ ಸುವರ್ಣ, ಮಾಲೀಕುದ್ದೀನಾರ್ ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ಗೌಡ, ರಾಮಕುಂಜ ಗ್ರಾ.ಪಂ. ಅಧ್ಯಕ್ಷೆ ಸುಚೇತಾ, ಕೊಯಿಲ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ, ಉಪ್ಪಿನಂಗಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನೀಲ್‌ಕುಮಾರ್ ದಡ್ಡು, ನಿರ್ದೇಶಕ ಯಶವಂತ ಜಿ., ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಇಳಂತಿಲ ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ ಗೌಡ, ರಾಮಕುಂಜ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಸಚಿನ್ ಜ್ಯೂಸ್ ಸೆಂಟರ್ ಮಾಲಕ ಸುಂದರ ಗೌಡ ಅರ್ಬಿ, ನ್ಯೂ ಅಶ್ವಿನಿ ಮಾಲಕ ಗಣೇಶ್, ಅಶ್ವಿನ್ ಹೋಂ ಅಫ್ಲೈಯೆನ್ಸಸ್ ಮಾಲಕ ಪ್ರಕಾಶ್, ಸಚಿನ್ ಬೇಕ್ ಆಂಡ್ ಐಸ್‌ಕ್ರೀಂ ಮಾಲಕ ಸಚಿನ್, ಹೊಟೇಲ್ ಅನ್ನಪೂರ್ಣ ಮಾಲಕ ಜಯರಾಮ, ಶ್ರೀ ರಾಮ ಮೆಡಿಕಲ್ಸ್ ಮಾಲಕ ಶಿವಪ್ರಸಾದ್, , ಬಾಹುಬಲಿ ಫರ್ನೀಚರ‍್ಸ್ ಮಾಲಕ ಅನಂತರಾಜ್, ಮಾನಸ ಕ್ಲಿನಿಕ್‌ನ ಡಾ. ಸಂತೋಷ್, ವಿವಾ ಫ್ಯಾಶನ್‌ನ ಮಾಲಕ ಇಮ್ತಿಯಾಜ್, ಪ್ರಮುಖರಾದ ಕೈಲಾರ್ ರಾಜಗೋಪಾಲ ಭಟ್, ಜಯಾನಂದ ಕಲ್ಲಾಪು, , ಬಾಲಚಂದ್ರ ಗುಂಡ್ಯ, ವಿದ್ಯಾಜನಾರ್ದನ್, ಅಝೀಝ್ ಬಸ್ತಿಕ್ಕಾರ್, ಡಾ. ಶೌರಿ ರೈ, ಗುರುಪ್ರಸಾದ್ ರಾಮಕುಂಜ, ಯದುಶ್ರೀ ಆನೆಗುಂಡಿ, ಮಹೇಂದ್ರವರ್ಮ, ಜಯರಾಜ್ ಬರೆಂಬೊಟ್ಟು, ನಝೀರ್ ಮಠ, ಪುರಂದರ ಬಾರ್ಲ, ಯು.ರಾಮ, ರವಿ ಇಳಂತಿಲ, ಝಕಾರಿಯಾ ಕೊಡಿಪ್ಪಾಡಿ, ರವಿಕಿರಣ್ ಕೊಲ, ಸವಿ ಎಲೆಕ್ಟ್ರಾನಿಕ್ಸ್ ಮಾಲಕ ನವೀನ್ ಕುಮಾರ್ ಆರ್.ಎಸ್. ಅವರ ತಾಯಿ ಜಾನಕಿ, ಪತ್ನಿ ಪ್ರೇಮ, ಸಹೋದರ ಪ್ರವೀಣ್, ಪತ್ನಿ ಶಯನ, ರವೀಂದ್ರ ಆನ, ನೋಣಯ್ಯ, ಪ್ರಗತಿ ಎಂಟರ್‌ಪ್ರೈಸಸ್‌ನ ಮಾಲಕ ರಾಘವ ಬೊಳೊಳಿ ಅವರ ತಾಯಿ ಯಮುನಾ ಚೆನ್ನಯ್ಯ, ಪತ್ನಿ ಜಯಶ್ರೀ, ಸಹೋದರ ಪದ್ಮನಾಭ, ಪತ್ನಿ ರಮ್ಯ ಮತ್ತಿತರರು ಉಪಸ್ಥಿತರಿದ್ದು, ಶುಭ ಹಾರೈಸಿದರು.


ಸವಿ ಎಲೆಕ್ಟ್ರಾನಿಕ್ಸ್‌ನಲ್ಲಿ ಪಿಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳ ಬೃಹತ್ ಸಂಗ್ರಹವಿದ್ದು, ಸವಿ ಫೂಟ್‌ವೇರ್‌ನಲ್ಲಿ ಪಾದರಕ್ಷೆ, ಬ್ಯಾಗ್, ಹೆಲ್ಮೆಟ್ ಸೇರಿದಂತೆ ಇನ್ನಿತರ ವಸ್ತುಗಳ ಬೃಹತ್ ಸಂಗ್ರಹವಿದೆ. ಪ್ರಗತಿ ಎಲೆಕ್ಟ್ರಿಕಲ್ಸ್‌ನಲ್ಲಿ ಎಲೆಕ್ಟ್ರಿಕಲ್ಸ್ ಮತ್ತು ರೆಫ್ರಿಜರೇಷನ್‌ಗಳ ಮಾರಾಟ ಮತ್ತು ಸೇವೆಗಳು ಲಭ್ಯವಿದೆ. ಈ ಮೂರು ಮಳಿಗೆಗಳು ಒಂದೇ ಕಟ್ಟಡದಲ್ಲಿ ಶುಭಾರಂಭಗೊಂಡಿದ್ದು, ಗ್ರಾಹಕರಿಗೆ ಅನುಕೂಲಕರವೆನಿಸಿದೆ. ಶುಭಾರಂಭದ ಅಂಗವಾಗಿ ಡಿ.25ರಿಂದ ಜ.14ರವರೆಗೆ ಮಳಿಗೆಗೆ ಭೇಟಿ ನೀಡುವವರಿಗೆ ಉಚಿತ ಲಕ್ಕಿ ಕೂಪನ್ ಲಭ್ಯವಿದ್ದು, ಆಕರ್ಷಕ ಬಹುಮಾನವಾಗಿ 50 ಇಂಚಿನ ಎಲ್‌ಇಡಿ ಟಿವಿಯನ್ನು ಗೆಲ್ಲುವ ಸುವರ್ಣಾವಕಾಶವಿದೆ. ಇದರ ಡ್ರಾವನ್ನು ಜ.14ರಂದು ಸಂಜೆ 6.30ಕ್ಕೆ ನೆರವೇರಿಸಲಾಗುವುದು.
ಸವಿ ಎಲೆಕ್ಟ್ರಾನಿಕ್ಸ್‌ನ ಮಾಲಕರಾದ ನವೀನ್ ಕುಮಾರ್ ಆರ್.ಎಸ್., ಪ್ರಗತಿ ಎಲೆಕ್ಟ್ರಿಕಲ್ಸ್‌ನ ಮಾಲಕರಾದ ರಾಘವ ಬೊಳೊಳಿ, ಸವಿ ಫೂಟ್‌ವೇರ್‌ನ ಮಾಲಕರಾದ ಬಾಲಕೃಷ್ಣ ಗೌಡ ಎಂ. ಹಾಗೂ ಜಯಪ್ರಕಾಶ್ ಕಳುವಾಜೆ ಅತಿಥಿಗಳನ್ನು ಸ್ವಾಗತಿಸಿ, ಸರ್ವರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here