ರಾಜ್ಯದ 12 ಕೇಂದ್ರಗಳಲ್ಲಿ ವಿವೇಕಾನಂದ ಐಎಸ್ ತರಬೇತಿ ಕೇಂದ್ರ ಯಶಸ್ ನ ಮೊದಲ ಹಂತದ ಪ್ರವೇಶ ಪರೀಕ್ಷೆ

0

ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜು ಇದರ ಅಧೀನದಲ್ಲಿ ವಿವೇಕಾನಂದ ಐಎಸ್ ತರಬೇತಿ ಕೇಂದ್ರ ಯಶಸ್ ನ ಆಶ್ರಯದಲ್ಲಿ ನಾಗರಿಕ ಸೇವಾ ತರಬೇತಿಗೆ ಸೇರ ಬಯಸುವ ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ ಹಂತದ ಪ್ರವೇಶ ಪರೀಕ್ಷೆಯು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಯಿತು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಹಾಸನ, ಕೊಡಗು ಜಿಲ್ಲೆ ಸೇರಿದಂತೆ ಒಟ್ಟು 12 ವಿವಿಧ ಕೇಂದ್ರಗಳಲ್ಲಿ 1023 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಯುಪಿಎಸ್ಸಿ, ಐಎಸ್, ಕೆಪಿಸ್ ಪರೀಕ್ಷೆ ಎಂದರೆ ಅದೊಂದು ಕಷ್ಟದ ಪರೀಕ್ಷೆ, ಅದನ್ನು ಪಾಸ್ ಮಾಡುವುದು ಸುಲಭದ ಮಾತಲ್ಲ ಎಂದು ಅನೇಕರು ಹಿಂಜರಿಯುತ್ತಾರೆ. ಹಾಗೆಂದುಕೊಂಡೇ ಮನದೊಳಗೆ ಅಧಿಕಾರಿಯಾಗುವ ಬಯಕೆಯನ್ನು ಚಿವುಟಿಬಿಡುತ್ತಾರೆ. ಆದರೆ ಪ್ರಮುಖ ಸಂಗತಿಯೆಂದರೆ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಕಷ್ಟ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪರೀಕ್ಷೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಅದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಿಕೊಂಡಾಗ ಸುಲಭವೆನಿಸುತ್ತದೆ. ಕಳೆದ ಎಂಟು ವರ್ಷಗಳಿಂದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಾಗರಿಕ ಸೇವೆಗೆ ಸೇರಬಯಸುವ ವಿದ್ಯಾರ್ಥಿಗಳಿಗಾಗಿ ವಿವೇಕಾನಂದ ಐಎಸ್ ತರಬೇತಿ ಕೇಂದ್ರ ಯಶಸ್ ಉಚಿತವಾಗಿ ತರಬೇತಿಯನ್ನು ನೀಡುತ್ತಾ ಬಂದಿದೆ. ಬಡ ವಿದ್ಯಾರ್ಥಿಗಳು ಕೂಡ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಈ ಮೂಲಕ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ.

LEAVE A REPLY

Please enter your comment!
Please enter your name here