





ಪುತ್ತೂರು:ಪಡ್ನೂರು ಗ್ರಾಮದ ದೇಂತಡ್ಕ ಶ್ರೀ ವನಶಾಸ್ತಾರ ದೇವಸ್ಥಾನದಲ್ಲಿ ಜ.17ರಂದು ನಡೆಯಲಿರುವ ಪ್ರತಿಷ್ಠಾ ವರ್ಧಂತ್ಯುತ್ಸವದ ಆಮಂತ್ರಣ ಪತ್ರಿಕೆಯು ಡಿ.23ರಂದು ಬಿಡುಗಡೆಗೊಂಡಿತು.


ದೇವಸ್ಥಾನದಲ್ಲಿ ವಾರದ ವಿಶೇಷ ರಂಗಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ವನಶಾಸ್ತಾರ ಸಪರಿವಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ.ಟಿ ಮುರಳಿ, ಸದಸ್ಯರಾದ ಶಿವರಾಮ ನಾೖಕ್, ಚಂದ್ರಶೇಖರ್ ನಾೖಕ್, ಹಾರಕರೆ ವೆಂಕಟ್ರಮಣ ಭಟ್, ವಿಜಯ ನಾರಾಯಣ ಕುಂಬಾಡಿ, ಗೋಪಾಲಕೃಷ್ಣ ಭಟ್ ಕೆದಿಮಾರ್, ಪೂವಪ್ಪ ದೇಂತಡ್ಕ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.













