ಬಲ್ನಾಡು:ಸಾಲ ಮರುಪಾವತಿಸಲಾಗದೆ ಮಹಿಳೆ ವಿಷಸೇವಿಸಿ ಆತ್ಮಹತ್ಯೆ

0

ಪುತ್ತೂರು:ಮನೆ ನಿರ್ಮಾಣ ಕೆಲಸಕ್ಕೆಂದು ಪಡೆದುಕೊಂಡಿದ್ದ ಸಾಲವನ್ನು ಮರುಪಾವತಿ ಮಾಡಲಾಗದೆ ಬೇಸರದಲ್ಲಿದ್ದ ಮಹಿಳೆಯೋರ್ವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಲ್ನಾಡಿನಿಂದ ವರದಿಯಾಗಿದೆ.

ಬಲ್ನಾಡು ಗ್ರಾಮದ ಕೊಪ್ಪಳಪದವು ಯೋಗೀಶ್ ಎಂಬವರ ಪತ್ನಿ ಶ್ರೀಮತಿ ಕೇಸರಿ(41ವ.)ಆತ್ಮಹತ್ಯೆ ಮಾಡಿಕೊಂಡವರು.ತೋಟಕ್ಕೆ ಹಾಕಲು ತಂದಿರಿಸಿದ್ದ ಕಳೆನಾಶಕ ಸೇವಿಸಿ ಆಕೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಕೊಪ್ಪಳಪದವು ಬಾಬು ನಾಯ್ಕರ ಮಗ ಯೋಗೀಶ್ ಅವರ ಪತ್ನಿ ಕೇಸರಿಯವರು ತಮ್ಮ ಮನೆಯ ಕೆಲಸಕ್ಕಾಗಿ ಪರಿಚಯದವರಿಂದ ಮತ್ತು ಸಂಬಂಧಿಕರಿಂದ ಹಾಗೂ ಸ್ವಸಹಾಯ ಸಂಘದಿಂದ ಕೈ ಸಾಲ ಮಾಡಿದ್ದರು.

ಸಾಲ ನೀಡಿದವರಿಗೆ ಮರುಪಾವತಿ ಮಾಡಲಾಗದ ಕಾರಣ ಬೇಸರದಲ್ಲಿದ್ದು, ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಪತ್ನಿಗೆ ನಾನು ಸಮಾಧಾನ ಹೇಳುತ್ತಿದ್ದೆ.ಜ.5ರಂದು ಬೆಳಗ್ಗೆ ನಾನು ಕೆಲಸಕ್ಕೆ ಹೋಗಿದ್ದೆ.ಮಧ್ಯಾಹ್ನ 1 ಗಂಟೆಗೆ ನನ್ನ ಅಣ್ಣ ಕುಶಾಲಪ್ಪರವರು ನನಗೆ ಫೋನ್ ಕರೆ ಮಾಡಿ,ಪತ್ನಿ ಕೇಸರಿ ಮನೆ ಬಳಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿರುವುದಾಗಿ ತಿಳಿಸಿದ್ದರು.ಕೂಡಲೇ ನಾನು ಮನೆಗೆ ಬಂದು ಪತ್ನಿ ಕೇಸರಿಯನ್ನು ಚಿಕಿತ್ಸೆಗಾಗಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಚಿಕಿತ್ಸೆಯಲ್ಲಿದ್ದ ಪತ್ನಿ ಶ್ರೀಮತಿ ಕೇಸರಿಯು ಜ.6ರಂದು ಬೆಳಿಗ್ಗೆ 6.45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಮೃತರ ಪತಿ ಯೋಗೀಶ್ ಅವರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕುವೆತ್ತಿಲ ಮೂಲದವರಾಗಿರುವ ಮೃತ ಕೇಸರಿಯವರು ಆರಂಭದಲ್ಲಿ ಹಲವು ವರ್ಷಗಳ ಕಾಲ ಹಾರಾಡಿಯಲ್ಲಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಮೃತರು ಪತಿ, ಇಬ್ಬರು ಪುತ್ರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ಮೀಟರ್ ಬಡ್ಡಿಯವರ ಕಿರುಕುಳ-ವರದಿ:
ಮೀಟರ್ ಬಡ್ಡಿಯವರ ಕಿರುಕುಳದಿಂದ ಬೇಸತ್ತು ಕೇಸರಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿ ಪ್ರಸಾರವಾಗಿದೆ.

LEAVE A REPLY

Please enter your comment!
Please enter your name here