ಪುತ್ತೂರು: ದ.ಕ ಜಿಲ್ಲಾ ವಾಲಿಬಾಲ್ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ಪುತ್ತೂರು ತಾಲೂಕು ವಾಲಿಬಾಲ್ ಸಂಸ್ಥೆ ಮತ್ತು ಸುದಾನ ವಸತಿಯುತ ವಿದ್ಯಾಸಂಸ್ಥೆ ಪುತ್ತೂರು ಇವರ ಸಹಯೋಗದೊಂದಿಗೆ ಜ.6ರಂದು ಸುದಾನ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ 14, 17 ಮತ್ತು 19 ವರ್ಷ ವಯೋಮಾನದ ದ.ಕ ಜಿಲ್ಲಾ ಶಾಲಾ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದ 14 ವಯೋಮಾನ ವಿಭಾಗದಲ್ಲಿ ದರ್ಬೆ ಬೆಥನಿ ವಿದ್ಯಾ ಸಂಸ್ಥೆ ಪ್ರಥಮ ಸ್ಥಾನ ವನ್ನು ಪಡೆದು ಕೊಂಡಿದೆ.
ಪಂದ್ಯಾಟದಲ್ಲಿ ಎಸ್ ಮೊಹಮ್ಮದ್ ಹನಿನ್ ಬೆಸ್ಟ್ ಅಟ್ಯಾಕರ್ ಹಾಗೂ ಮೊಹಮ್ಮದ್ ಶಾನ್ ಬೆಸ್ಟ್ ಸೆಟರ್ ಆಗಿ ಈ ಪಂದ್ಯಾಟದಿಂದ ಹೊರ ಹೊಮ್ಮಿದ್ದಾರೆ. ಅದೆ ರೀತಿ ಗಗನ್ ದೀಪ್ ಬಿ ಎಂ, ಕಿರಣ್, ಮೊಹಮ್ಮದ್ ಶಾಜದ್, ಕ್ಲೇಟನ್ ದೀಕ್ಷಾನ್ ತೋರಸ್, ಅನ್ವಿತ್ ರೈ, ಬಿ ಈಶನ್ ಪ್ರಭು, ಪ್ರಥಮ್ ಕಶ್ಯಪ್, ಮೊಹಮದ್ ತಬಿಶೇರ್, ಆಯಾತುಲ್ಲ ಸಲೀಂ, ಇಬ್ರಾಹಿಂ ಫಾಶಿಲ್, ಮೊಹಮದ್ ಸುಹಾನ್ ತಂಡದಲ್ಲಿ ಭಾಗವಹಿಸಿದ್ದರು. ನಿರಂಜನ್ ಹಾಗೂ ಅಕ್ಷಯ್ ಈ ತಂಡಕ್ಕೆ ತರಬೇತಿಯನ್ನು ನೀಡಿರುತ್ತಾರೆ. ಮುಖ್ಯ ಶಿಕ್ಷಕಿ ಭಗಿಣಿ ಸೆಲಿನ್ ಪೇತ್ರಾ ವಿಜೇತ ತಂಡಕ್ಕೆ ಪ್ರೋತ್ಸಾಹ ನೀಡಿದ್ದಾರೆ.