





ಉಪ್ಪಿನಂಗಡಿ: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀಗಳಾದ ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಅವರ ಶಿಷ್ಯರು ಪರ್ಯಾಯ ಸಂಚಾರ ನಿಮಿತ್ತ 34ನೇ ನೆಕ್ಕಿಲಾಡಿ ಶ್ರೀ ಗುರುರಾಘವೇಂದ್ರ ಮಠಕ್ಕೆ ಭೇಟಿ ನೀಡಿ ಜೀರ್ಣೋದ್ಧಾರದ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು.



ಈ ಸಂದರ್ಭದಲ್ಲಿ ಮಠದ ಅಧ್ಯಕ್ಷ ಉದಯಕುಮಾರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಉಪಾಧ್ಯಾಯ, ಕಾರ್ಯದರ್ಶಿ ಎನ್.ಗೋಪಾಲ ಹೆಗ್ಡೆ, ಜೊತೆ ಕಾರ್ಯದರ್ಶಿ ಶ್ರೀನಿಧಿ ಉಪಾಧ್ಯಾಯ, ಪ್ರಮುಖರಾದ ಯು.ಜಿ.ರಾಧ, ಶಿವಕುಮಾರ್ ಬಾರಿತ್ತಾಯ, ವಿನೀತ್ ಶಗಿತ್ತಾಯ ಹಾಗೂ ಸ್ವಾಮೀಜಿಗಳ ಶಿಷ್ಯರಾದ ಉಳಿ ಯೋಗಿಂದ್ರ ಭಟ್, ಮಠದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.














