ಮಳೆಕೊಯ್ಲು, ಸೋಲಾರ್ ಗ್ರಿಡ್, ಇಲಾಖಾ ಮಾಹಿತಿ ಕೃಷಿ ಸಂಬಂಧಿತ ವಿವಿಧ ತರಬೇತಿಗಳು
ಉದ್ಯಮಿಗಳಿಗೆ ZED ಸರ್ಟಿಫಿಕೇಶನ್ ಮಾಹಿತಿ, ಮಾರ್ಕೆಟಿಂಗ್ ರಪ್ತು ಬಗ್ಗೆ ಮಾಹಿತಿ
ಸರಿಯಾದ ಮಾಹಿತಿ ಇದ್ದರೆ ಅರ್ಧ ಕೆಲಸ ಆದಂತೆ ಎಂಬ ಗಾದೆ ಮಾತಿದೆ. ಅದನ್ನು ಸರಿಯಾದ ಮಾಹಿತಿ ಇದ್ದರೆ ಪೂರ್ಣ ಕೆಲಸ ಆದಂತೆ ಎಂದು ಸುದ್ದಿ ಹಿಂದಿನಿಂದಲೂ ಹೇಳುತ್ತಾ ಬಂದಿದೆ. ಅದಕ್ಕಾಗಿ ಸುದ್ದಿ ಪತ್ರಿಕೆ ಪ್ರಾರಂಭಿಸುವಾಗ ಸುದ್ದಿ ಮಾಹಿತಿ ಕೇಂದ್ರ, ಸುದ್ದಿ ಸೆಂಟರ್‌ಗಳನ್ನು ಪ್ರಾರಂಭಿಸಿ ಮಾಹಿತಿ ಪುಸ್ತಕಗಳನ್ನು ಹೊರತಂದಿದ್ದೇವೆ. ಪತ್ರಿಕೆಯಲ್ಲಿ ನಿರಂತರವಾಗಿ ನೀಡುತ್ತಿದ್ದೇವೆ. ಇದೀಗ ಮೊಬೈಲ್, ಸಾಮಾಜಿಕ ಜಾಲತಾಣಗಳ ಯುಗವೇ ಆಗಿದ್ದರೂ, ಗೂಗಲ್‌ನಲ್ಲಿ ಎಲ್ಲಾ ಮಾಹಿತಿಗಳು ಸಿಗುತ್ತವೆ ಎಂದಿದ್ದರೂ, ಸುದ್ದಿ ಮಾಹಿತಿ ಕೇಂದ್ರ ಎಂದಿಗೂ ಸ್ಥಾನ ಬಿಟ್ಟುಕೊಟ್ಟಿಲ್ಲ. ಇಂದಿಗೂ ಜನೋಪಕಾರಿಯಾಗಿ ಕೆಲಸ ಮಾಡುತ್ತಿದೆ.
ಈಗಿನ ಕಾಲಕ್ಕೆ ಸರಿಯಾಗಿ ಸುದ್ದಿ ಮಾಹಿತಿ ಕೇಂದ್ರ ಇದೀಗ ಅರಿವು ಕೃಷಿ ಕೇಂದ್ರ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದೆ. ಹೊಸದಾಗಿ ಉದ್ಯಮವನ್ನು ಮಾಡುವವರಿಗೆ ಈಗ ವಿಫಲ ಅವಕಾಶಗಳಿವೆ. ಸಣ್ಣ ಸಣ್ಣ ಉದ್ದಿಮೆದಾರರು ಮಾಡಬೇಕಾದ ಉತ್ಪನ್ನಗಳ ಮಾಹಿತಿ, ಯಂತ್ರೋಪಕರಣಗಳು, ಬ್ಯಾಂಕ್ ಸಾಲ, ಸಬ್ಸಿಡಿ, ಮಾರುಕಟ್ಟೆಯ ಮಾಹಿತಿಯೊಂದಿಗೆ ರಪ್ತು ಮಾಡುವ ಮಾಹಿತಿಯನ್ನು ಅರಿವು ಕೃಷಿ ಕೇಂದ್ರ ಒದಗಿಸಲಿದೆ. ಇದರೊಂದಿಗೆ ಉದ್ಯಮಗಳಿಗೆ ಬೇಕಾದ ಉದ್ಯಮ ಸರ್ಟಿಫಿಕೇಟ್, ಝೆಡ್ ಸರ್ಟಿಫಿಕೇಟ್‌ನ ಮಾಹಿತಿ ಅದರಿಂದ ದೊರಕುವ ಪ್ರಯೋಜನಗಳ ಬಗ್ಗೆ ಗ್ಲೋಬಲ್ ಇನ್ಸ್ಟಿಟ್ಯೂಟ್‌ನೊಂದಿಗೆ ಸೇರಿ ನೋಂದಾವಣೆ ಹಾಗೂ ಮಾಹಿತಿ ನೀಡುತ್ತಿದೆ. ಮಾರುಕಟ್ಟೆಯೊಂದಿಗೆ ವಿದೇಶಕ್ಕೆ ಕಳಿಸುವವರೆಗಿನ ಸರ್ವೀಸ್ ಜಾಲವನ್ನು ಪ್ರಾರಂಭಿಸಲಿದ್ದೇವೆ.
ಈ ಮೇಲಿನ ವಿಷಯಗಳಿಗೆ ಸಂಬಂಧ ಪಟ್ಟ ಮಾಹಿತಿ ಮತ್ತು ತರಬೇತಿಗಳನ್ನು ಏರ್ಪಡಿಸುತ್ತಿದ್ದೇವೆ. ಮಳೆಕೊಯ್ಲುನಿಂದ ಆಗುವ ಪ್ರಯೋಜನ, ಸೋಲಾರ್ ಗ್ರಿಡ್‌ನಿಂದ ವಿದ್ಯುತ್ ಉತ್ಪಾದಿಸಿ ಹಣ ಸಂಪಾದಿಸುವ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಸರಕಾರಿ ಇಲಾಖೆಗಳ ಮಾಹಿತಿಯನ್ನು, ವಿವಿಧ ತರಬೇತಿಗಳನ್ನು ಈಗಾಗಲೇ ನೀಡುತ್ತಿದ್ದೇವೆ. ಉದ್ಯೋಗ ಮತ್ತು ಅವಕಾಶಗಳ ಬಗ್ಗೆಯೂ ತರಬೇತಿ ದೊರೆಯಲಿದೆ. ಜನರಿಗೆ ಮತ್ತು ಇಲಾಖೆಗಳ ನಡುವಿನ ಸಂಪರ್ಕ ಮತ್ತು ಸೇವೆಯ ಕೊಂಡಿಯಾಗಿ ಅರಿವು ಕೃಷಿ ಕೇಂದ್ರ ಕೆಲಸ ಮಾಡಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಈ ಸಂಬಂಧ ಕಚೇರಿಯನ್ನು ಪ್ರಾರಂಭಿಸಿದ್ದೇವೆ. ಈ ಎಲ್ಲಾ ಕೆಲಸಗಳು ಹೊಸ ವರ್ಷದಲ್ಲಿ ಜನತೆಗೆ ಹರುಷ ತರಲಿ, ಆರೋಗ್ಯ, ಸಂಪತ್ತು ನೀಡಲಿ ಎಂದು ಹಾರೈಸುತ್ತಿದ್ದೇವೆ.