ಜ.23: ಪಿ .ಎಸ್ .ಐ ಹುದ್ದೆ ಪರೀಕ್ಷೆ-ವಿದ್ಯಾಮಾತಾದಲ್ಲಿ ನಾಳೆಯಿಂದ(ಜ.9) ಉಚಿತ ತರಬೇತಿ

0

ಪುತ್ತೂರು : ಕಳೆದ ಹಲವು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡುತ್ತಿರುವ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮರು ನೇಮಕಾತಿ ಪರೀಕ್ಷೆಗೆ ಹಾಜರಾಗೋ ಅಭ್ಯರ್ಥಿಗಳಿಗೆ ಉಚಿತವಾಗಿ ಪ್ರತಿದಿನ ಒಂದು ಗಂಟೆ ಸಮಯದ ತರಬೇತಿ ಘೋಷಣೆ ಮಾಡಿದೆ.

ಜ. 23 ನಡೆಯಲಿರುವ ಸಮಾರು 545 ಪಿ ಎಸ್ ಐ ಹುದ್ದೆಗಳ ಮರು ಪರೀಕ್ಷೆಯನ್ನು ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನವರಿ 9 ರಿಂದಲೇ ಪ್ರಾರಂಭವಾಗಲಿರುವ ಆನ್ ಲೈನ್ ತರಬೇತಿಯೂ ರಾತ್ರಿ 8ರಿಂದ 9ರವರೆಗೆ ಇರಲಿದ್ದು ,ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಕಛೇರಿ ಸಂಖ್ಯೆ 9448527606ನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here