ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿಯ ಶಾಲಾ ಮೈದಾನ ಮಕ್ಕಳ ಮೆಟ್ರಿಕ್ ಮೇಳ ನಡೆಯಿತು.ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ಎಂ ದಿನೇಶ ಗೌಡ ಮೆಟ್ರಿಕ್ ಮೇಳಕ್ಕೆ ಚಾಲನೆ ನೀಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ನಾರಾಯಣ ಸುವರ್ಣ, ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ ಸುಧಾಕರ ಕುಲಾಲ್, ಸದಸ್ಯ ತಾರನಾಥ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಶುಭ ಲತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರಿಮೊಗರು ಕ್ಲಸ್ಟರ್ ಸಿ ಆರ್ ಪಿ ಪರಮೇಶ್ವರಿ ಮೆಟ್ರಿಕ್ ಮೇಳದ ಉದ್ದೇಶವನ್ನು ತಿಳಿಸಿದರು.ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ಮೆಟ್ರಿಕ್ ಮೇಳಕ್ಕೆ ಭೇಟಿ,BIRT ತನುಜಾ ಶುಭ ಹಾರೈಸಿದರು.
ಮನೆಯಲ್ಲಿ ಬೆಳೆದ ವಿವಿಧ ತರಕಾರಿಗಳು ಹಣ್ಣು ಹಂಪಲು ಔಷಧೀಯ ಗುಣವುಳ್ಳ ಗಿಡಗಳು, ತೊಗಟೆಗಳು, ಎಳನೀರು, ಮನೆಯಲ್ಲಿ ತಯಾರಿಸಿದ ತಿಂಡಿಗಳು, ವಿವಿಧ ರೀತಿಯ ಪಾನಕಗಳು, ವಿವಿಧ ಆಟಗಳೊಂದಿಗೆ ವಿದ್ಯಾರ್ಥಿಗಳು ತಾವೇ ಕಟ್ಟಿದ ಅಂಗಡಿಗಳಲ್ಲಿ ವ್ಯಾಪಾರಕ್ಕೆ ನಿಂತು ಗ್ರಾಹಕರನ್ನು ಸೆಳೆದರು. ಪ್ರತಿಯೊಂದು ಅಂಗಡಿಗಳಲ್ಲಿಯೂ ವಸ್ತುಗಳ ದರಪಟ್ಟಿ ಮತ್ತು ಹೋಟೆಲ್ ಮೆನು ಎಲ್ಲರ ಗಮನ ಸೆಳೆಯಿತು.
ಗಣಿತ ಶಿಕ್ಷಕಿ ಅಕ್ಷತಾ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಶಿಕ್ಷಕರಾದ ಫೆಲ್ಸಿಟಾ ಡಿ ಕುನ್ಹಾ, ವಿಶಾಲಾಕ್ಷಿ ಕೆ, ಮಾಲತಿ, ಸೌಮ್ಯ, ಶಾಲಾ ಎಸ್ ಡಿ ಎಂ ಸಿ ಮತ್ತು ಪೋಷಕರು ಸಹಕರಿಸಿದರು.