ಬೊಳುವಾರು ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಪಾಕ್ಷಿಕ ಯಕ್ಷಗಾನ ತಾಳಮದ್ದಳೆ ಪಾರ್ತಿಸುಬ್ಬ ವಿರಚಿತ ಸೀತಾಪಹಾರಣದ ಪೂರ್ವ ಭಾಗದ ರಾವಣ ಮಂಡೋದರಿ ರಾವಣ- ಮಾರೀಚ ಹಾಗು ಶ್ರೀರಾಮ ಸೀತಾ ಲಕ್ಷ್ಮಣ ಎಂಬ ಕಥ ಭಾಗದ ತಾಳಮದ್ದಳೆ ಜ.7ರಂದು ಸಂಜೆ ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು.

ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಆನಂದ ಸವಣೂರು, ಪ್ರೊ.ದಂಬೆ ಈಶ್ವರ ಶಾಸ್ತ್ರೀ , ಮುರಳೀಧರ ಕಲ್ಲೂರಾಯ, ಶ್ರೀಪತಿ ಭಟ್ ಉಪ್ಪಿನಂಗಡಿ , ಪರೀಕ್ಷಿತ್‌ಪುತ್ತೂರು ಸಹಕರಿಸಿದರು.ಮುಮ್ಮೇಳದಲ್ಲಿ ಪೂಕಳ ಲಕ್ಷ್ಮೀನಾರಾಯಣ ಭಟ್ ಮತ್ತು ಗುಡ್ಡಪ್ಪ ಬಲ್ಯ ( ರಾವಣ ), ಭಾಸ್ಕರ್ ಬಾರ್ಯ ( ಮಂಡೋದರಿ ), ಹರೀಶ್ ಆಚಾರ್ಯ ಬಾರ್ಯ ( ಮಾರೀಚ ), ಶ್ರೀರಾಮ ( ಅಚ್ಯುತ ಪಾಂಗಣ್ಣಾಯ ಕೋಡಿಬೈಲು ), ಸೀತೆ ( ತಾರಾನಾಥ ಸವಣೂರು ), ಗುಡ್ಡಪ್ಪ ಬಲ್ಯ ( ಲಕ್ಷ್ಮಣ) ಸಹಕರಿಸಿದರು. ಕಾರ್ಯದರ್ಶಿ ಹಾಗು ಸಹ ಕಾರ್ಯದರ್ಶಿ ಗಳಾದ ಆನಂದ ಸವಣೂರು , ಅಚ್ಯುತಪಾಂಗಣ್ಣಾಯ ಪ್ರಾಯೋಜಿಸಿದ್ದರು.ಗೌರವ ಕಾರ್ಯದರ್ಶಿ ಟಿ ರಂಗನಾಥ ರಾವ್ ಸ್ವಾಗತಿಸಿ ವಂದಿಸಿದರು.ಕಾರ್ಯಕ್ರಮದ ಮೊದಲು ಯಕ್ಷಗಾನ ಪ್ರಸಂಗಕರ್ತ ಸಾಹಿತಿ ವಿದ್ವಾಂಸರಾದ ಪ್ರೊ.ಅಮೃತ ಸೋಮೇಶ್ವರರವರಿಗೆ ನುಡಿನಮನ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here