ಪುತ್ತೂರು: 2023-24ನೇ ಸಾಲಿನ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ 5,8 ಮತ್ತು 9ನೇ ತರಗತಿಯ ಸಂಕಲನಾತ್ಮಕ ಮೌಲ್ಯಂಕನ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ್ದು ಮಾ.11ರಿಂದ ಪರೀಕ್ಷೆಗಳು ಪ್ರಾರಂಭಗೊಳ್ಳಲಿದೆ.
5ನೇ ತರಗತಿ:
5ನೇ ತರಗತಿಯ ಪರೀಕ್ಷೆಗಳು ಮಾ.11 ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಮಾ.12 ದ್ವೀತಿಯ ಭಾಷೆ ಇಂಗ್ಲಿಷ್, ಕನ್ನಡ, ಮಾ.13 ಪರಿಸರ ಅಧ್ಯಯನ, ಮಾ.14 ಗಣಿತ ಪರೀಕ್ಷೆ ನಡೆಯಲಿದೆ. ಮೌಲ್ಯಂಕನಾ ಪರೀಕ್ಷೆಯು ಒಟ್ಟು 40 ಅಂಕಗಳನ್ನು ಒಳಗೊಂಡಿದೆ. 2 ಗಂಟೆಯ ಅವಧಿಯ ಪರೀಕ್ಷೆಯು ನಿಗಧಿ ಪಡಿಸಿದ ದಿನಗಳಲ್ಲಿ ಪ್ರತಿದಿನ ಮಧ್ಯಾಹ್ನ 2.30ರಿಂದ 4.30ರ ತನಕ ನಡೆಯಲಿದೆ.
8ನೇ ತರಗತಿ:
8ನೇ ತರಗತಿಯ ಪರೀಕ್ಷೆಗಳು ಮಾ. ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ. ಮಾ.12 ದ್ವೀತಿಯ ಭಾಷೆ, ಇಂಗ್ಲಿಷ್, ಕನ್ನಡ, ಮಾ.13 ತೃತೀಯ ಭಾಷೆ- ಹಿಂದಿ, ಹಿಂದಿ( NCERT), ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮಾ.14 ಗಣಿತ, ಮಾ.15 ವಿಜ್ಞಾನ, ಮಾ.16 ಸಮಾಜ ವಿಜ್ಞಾನ, ಮಾ.18ದೈಹಿಕ ಶಿಕ್ಷಣ ಪರೀಕ್ಷೆಗಳು ನಡೆಯಲಿದೆ.
9ನೇ ತರಗತಿ:
9ನೇ ತರಗತಿ ಮೌಲ್ಯಾಂಕನ ಪರೀಕ್ಷೆಗಳು ಮಾ.11 ಪ್ರಥಮ ಭಾಷೆ-ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ, ಮಾ.12 ದ್ವೀತಿಯ ಭಾಷೆ, ಇಂಗ್ಲಿಷ್, ಕನ್ನಡ, ಮಾ.13 ತೃತೀಯ ಭಾಷೆ- ಹಿಂದಿ, ಹಿಂದಿ (NCERT) ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮಾ.14 ಗಣಿತ, ಮಾ.15 ವಿಜ್ಞಾನ, ಮಾ.16 ಸಮಾಜ ವಿಜ್ಞಾನ ಹಾಗೂ ಮಾ.18 ದೈಹಿಕ ಶಿಕ್ಷಣ ಪರೀಕ್ಷೆಗಳು ನಡೆಯಲಿದೆ.