ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ದಾರಂದಕುಕ್ಕುವಿನಲ್ಲಿರುವ ಡಿ.ಕೆ ಕಾಂಪ್ಲೆಕ್ಸ್ನಲ್ಲಿ ಮುರುಗಪ್ಪ ಗ್ರೂಪಿನ ಮೊಂಟ್ರ ಎಲೆಕ್ಟ್ರಿಕ್ ಕಂಪೆನಿಯ ತನಿಯ ಮೋಟಾರ್ಸ್ನ ಉದ್ಘಾಟನೆ ಜ.14ರಂದು ಬೆ.10.30ಕ್ಕೆ ನಡೆಯಲಿದೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ದೀಪ ಪ್ರಜ್ವಲನೆ ಮಾಡಲಿದ್ದು, ನಗರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಶಕ್ತಿನಗರ ಕೆನರಾ ಬ್ಯಾಂಕಿನ ಬ್ರಾಂಚ್ ಮ್ಯಾನೇಜರ್ ಪ್ರವೀಣ್ ವಿ,ಬಿ., ಸರಕಾರಿ ವಕೀಲ ರಾಘವೇಂದ್ರ ರಾವ್, ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಮಿತಾ ಎನ್, ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಎ.ಕೆ.ಬಶೀರ್ ಹಾಜಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಪ್ರಗತಿಪರ ಕೃಷಿಕ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪಾ, ಶ್ರೀ ಡೆವಲಪರ್ಸ್ನ ಗಿರೀಶ್ ಎಂ.ಶೆಟ್ಟಿ, ಪೈ ಸೇಲ್ಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ರತ್ನಾಕರ್ ಪೈ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಡ ಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ, ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂಧನದ ಹೊರೆಯನ್ನು ತಗ್ಗಿಸಲು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳು ಅತ್ಯಗತ್ಯ, ಇದು ದೇಶದ ಆರ್ಥಿಕತೆಗೆ ಅತ್ಯುನ್ನತ ಬಲವನ್ನು ನೀಡುತ್ತಿದೆ. ನವೀನ ವಿನ್ಯಾಸ, ಉತ್ತಮ ಗುಣಮಟ್ಟ, ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಮೊಂಟ್ರ ಇಲೆಕ್ಟ್ರಿಕ್ ‘ಸೂಪರ್ ಅಟೋ’ ರಿಕ್ಷ ಉತ್ತಮ ಮೈಲೆಜ್ ಕೊಡುತ್ತಿದೆ. ಇದನ್ನು ಪಡೆದುಕೊಂಡ ಗ್ರಾಹಕರಲ್ಲಿ ಸಂತೃಪ್ತಿ ಕಾಣುತ್ತಿದೆ. ಗ್ರಾಹಕರು ಇದನ್ನು ಖರೀದಿಸಬೇಕಾಗಿ ಸಂಸ್ಥೆಯ ಮಾಲಕ ಗೌತಮ್ ಜಿ. ಕುಲಾಲ್ ವಿನಂತಿಸಿದ್ದಾರೆ.