ಇಡಿ ಸಮಾಜವನ್ನು ಸೇರಿಸುವ ಶಕ್ತಿ ಭಜನೆಗಿದೆ – ನಳಿನ್ ಕುಮಾರ್ ಕಟೀಲ್
ಪುತ್ತೂರು: ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ನಿಂದ ಫೆ.9 ರಂದು ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದಲ್ಲಿ 16 ನೇ ವರ್ಷದ ಪುರಂದರ ದಾಸರ ಆರಾದನೋತ್ಸವ ಪ್ರಯುಕ್ತ ಕಾಟುಕುಕ್ಕೆ ಸುಬ್ರಾಯ ದೇವರಿಗೆ ಮಹಾಶತರುದ್ರಾಭಿಷೇಕ ಮತ್ತು 1 ಸಾವಿರ ಸರ್ವಸೇವೆ, 1ಸಾವಿರದ ಸಂಕೀರ್ತನಾ ಸಮರ್ಪಣೆ ಕಾರ್ಯಕ್ರಮದ ಆಮಂತ್ರಣ ಪತ್ರ ,5 ಹಾಡುಗಳ ಬಿಡುಗಡೆ ಮತ್ತು ಭಜನಾ ತಂಡಕ್ಕೆ ಸಮವಸ್ತ್ರ ಸೀರೆ ವಿತರಣೆ ಕಾರ್ಯಕ್ರಮ ಜ.12 ರಂದು ಬಪ್ಪಳಿಗೆ ಜೈನ ಭವನದಲ್ಲಿ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆಮಂತ್ರಣ ಪತ್ರ ಮತ್ತು 5 ಹಾಡುಗಳನ್ನು ಬಿಡುಗಡೆ ಮಾಡಿ, ಭಜನಾ ತಂಡಗಳಿಗೆ ಸಮವಸ್ರ್ತ ಸೀರೆ ವಿತರಣೆ ಮಾಡಿದರು.
ಇಡಿ ಸಮಾಜವನ್ನು ಸೇರಿಸುವ ಶಕ್ತಿ ಭಜನೆಗಿದೆ:
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಭಜನೆಯಿಂದ ವಿಭಜನೆಯಿಲ್ಲ ಎಂಬಂತೆ ಇವತ್ತು ಇಡಿ ಸಮಾಜವನ್ನು ಸೇರಿಸುವ ಶಕ್ತಿ ಭಜನೆಗಿದೆ. ಕಾಟುಕುಕ್ಕೆಯಲ್ಲಿ ನಡೆಯುವ ಸಾವಿರದ ಸಂಕೀರ್ತನಾ ಸಮರ್ಪಣೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹೇಳಿದರು. ಡಾ.ಸುರೇಶ್ ಪುತ್ತೂರಾಯ ದೇಣಿಗೆ ಪುಸ್ತಕ ಬಿಡುಗಡೆ ಮಾಡಿದರು. ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿದರು. ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪೂಡಾ ಮಾಜಿ ಅಧ್ಯಕ್ಷ ಎಸ್ ಅಪ್ಪಯ್ಯ ಮಣಿಯಾಣಿ, ಬಿಜೆಪಿ ದ ಕ ಜಿಲ್ಲಾ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಕಹಳೆ ನ್ಯೂಸ್ ನ ಶ್ಯಾಮ ಸುದರ್ಶನ್ ,ಈಶ್ವರಿ , ಉಷಾ ಶಿವರಾಮ್ , ಪರಮೇಶ್ವರಿ, ಕಿರಣ್ ಬಲ್ನಾಡು ವೈದೇಹಿ ವೈಷ್ಣವಿ ಭಜನಾ ಮಂಡಳಿ ಅಧ್ಯಕ್ಷೆ ಪ್ರೇಮಲತಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸುಶೀಲ ವಿದ್ಯಾಕೋಡಿ ಪ್ರಾರ್ಥಿಸಿದರು. ಕಾಟುಕುಕ್ಕೆ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಪರಮೇಶ್ವರಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಕ್ಷಾ ಕರುಣಾಕರ್ ವಂದಿಸಿದರು.ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.