ಜ.13: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

0

ಪುತ್ತೂರು: ಪ್ರತಿಷ್ಠಿತ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಗೆ ಜ. 13 ರಂದು ಬೆಳಿಗ್ಗೆ 9ರಿಂದ ಸಂಜೆ 4ರ ತನಕ ಚುನಾವಣೆ ನಡೆಯಲಿದೆ. ಒಟ್ಟು 12 ಸ್ಥಾನಗಳ ಪೈಕಿ 1 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದಿರುವ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಒಟ್ಟು 23 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಮತ್ತು ಕಾಂಗ್ರೇಸ್ ಎಲ್ಲಾ 11 ಸ್ಥಾನಗಳಿಗೆ ಸ್ಪರ್ಧೆ ಮಾಡುತ್ತಿದ್ದು, ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನದಲ್ಲಿ ಸ್ಪರ್ಧೆಯನ್ನು ಮಾಡುತ್ತಿದ್ದಾರೆ ಎಂದು ಚುನಾವಣಾಧಿಕಾರಿ ಶೋಭಾ ಎನ್.ಎಸ್. ತಿಳಿಸಿದ್ದಾರೆ.

ಸಹಕಾರ ಭಾರತೀಯ ಅಭ್ಯರ್ಥಿಗಳು: ಸಾಮಾನ್ಯ ಕ್ಷೇತ್ರದಿಂದ ಅಶ್ವಿನ್ ಎಲ್ ಶೆಟ್ಟಿ ಸವಣೂರು, ಉದಯ ರೈ ಮಾದೋಡಿ, ಗಣೇಶ್ ನಿಡ್ವಣ್ಣಾಯ, ತಾರಾನಾಥ ಕಾಯರ್ಗ, ಶಿವಪ್ರಸಾದ್ ಯಂ.ಎಸ್ ಹಾಗೂ ಮಹಿಳಾ ಸ್ಥಾನದಿಂದ ಜ್ಞಾನೇಶ್ವರಿ, ಹಾಗೂ ಸೀತಾಲಕ್ಷ್ಮಿ, ಹಿಂದುಳಿದ ವರ್ಗ ಎ ಯಿಂದ ಚೇತನ್ ಕುಮಾರ್, ಹಿಂದುಳಿದ ವರ್ಗ ಬಿ ಯಿಂದ ಚೆನ್ನಪ್ಪ ಗೌಡ ನೂಜಿ, ಪರಿಶಿಷ್ಟ ಪಂಗಡದಿಂದ ಗಂಗಾಧರ ನಾಯ್ಕ ಪೆರಿಯಡ್ಕ ಹಾಗೂ ಅನುಸೂಚಿತ ಜಾತಿಯಿಂದ ತಿಮ್ಮಪ್ಪ ರವರು ಕಣದಲ್ಲಿ ಇದ್ದಾರೆ.

ಕಾಂಗ್ರೆಸ್‌ನ ಅಭ್ಯರ್ಥಿಗಳು: ಸಾಮಾನ್ಯ ಸ್ಥಾನದಿಂದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಬಾಲಕೃಷ್ಣ ನೂಜಿ, ವಿಠಲ ಗೌಡ ಅಗಳಿ, ವೆಂಕಟೇಶ್ ಭಟ್ ಕೊಯಕುಡೆ, ಸುಲೈಮಾನ್. ಮಹಿಳಾ ಸ್ಥಾನದಿಂದ ಕುಸುಮ, ತೇಜಾಕ್ಷಿ, ಹಿಂದುಳಿದ ವರ್ಗ ಎ ಯಿಂದ ಸತೀಶ್ ಕುಮಾರ್ ಕೆಡೆಂಜಿ, ಹಿಂದುಳಿದ ವರ್ಗ ಬಿ ಯಿಂದ ಅವಿನಾಶ್ ಬೈತಡ್ಕ, ಪರಿಶಿಷ್ಟ ಪಂಗಡದಿಂದ ಗಂಗಾಧರ ನಾಯ್ಕ ಪರಣೆ, ಅನುಸೂಚಿತ ಜಾತಿಯಿಂದ ಕೇಶವರವರು ಕಣದಲ್ಲಿ ಇದ್ದಾರೆ.

ಪಕ್ಷೇತರ ಅಭ್ಯರ್ಥಿ: ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರರಾಗಿ ಯತೀಂದ್ರ ಶೆಟ್ಟಿ ಮಠ ಸ್ಪರ್ಧಿಸುತ್ತಿದ್ದಾರೆ.
ಜ. 13ರಂದು ಚುನಾವಣೆ, ಅದೇ ದಿನ ಸಂಜೆ ಫಲಿತಾಂಶ ಜ. 13 ರಂದು ಬೆಳಿಗ್ಗೆ 9 ರಿಂದ ಸಂಜೆ 4 ತನಕ ಚುನಾವಣೆ ನಡೆಯಲಿದ್ದು, ಅದೇ ದಿನ ಸಂಜೆ 6 ಗಂಟೆಯೊಳಗೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ಶೋಭಾರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here