ಪುತ್ತೂರು: ಪೂಮಾಣಿ- ಕಿನ್ನಿಮಾಣಿ- ಪಿಲಿಭೂತ ದೈವಸ್ಥಾನ ಆರ್ಲಪದವು ಪಾಣಾಜೆ ಇದರ ಜೀರ್ಣೋದ್ಧಾರ ಸಮಿತಿಯ ಸಭೆಯು ಸಮಿತಿಯ ಗೌರವಾಧ್ಯಕ್ಷ ,ಪುತ್ತೂರು ಶಾಸಕ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಪಾಣಾಜೆ ಶ್ರೀ ರಣಮಂಗಳ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಶಾಸಕ ಅಶೋಕ್ ರೈ ಎಲ್ಲಾ ಭಕ್ತಾಧಿಗಳ ಸಹಕಾರದಿಂದ ಜೀರ್ಣೋದ್ದಾರ ಕಾರ್ಯ ನಡೆಯಲಿದೆ. ಪಾಣಾಜೆ,ಬೆಟ್ಟಂಪಾಡಿ ಮತ್ತು ನಿಡ್ಪಳ್ಳಿ ಗ್ರಾಮಗಳು ನನ್ನ ಗ್ರಾಮಗಳು. ಶಾಸಕನಾಗುವ ಮೊದಲೇ ನಾನು ಈ ಮೂರು ಗ್ರಾಮಗಳ ಗ್ರಾಮಸ್ಥರ ಜೊತೆ ಅತೀ ಹತ್ತಿರದ ಸಂಪರ್ಕ ಹೊಂದಿದ್ದೇನೆ.ಯಾವುದೇ ಲೋಪದೋಷಗಳಿಲ್ಲದೆ ಜೀರ್ಣೋದ್ದಾರ ಕಾರ್ಯ ನೆರವೇರಲಿದೆ. ದೈವಸ್ಥಾನದ ಎಲ್ಲಾ ಕಾರ್ಯಗಳಲ್ಲೂ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.ಪಕ್ಷ ಬೇದವಿಲ್ಲದೆ ಎಲ್ಲರೂ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಸುಬ್ರಹ್ಮಣ್ಯ ರಣಮಂಗಳ ದೇವಸ್ಥಾನದ ಅನುವಂಶಿಕ ಅಡಳಿತ ಮೊಕ್ತೇಸರ ಕೃಷ್ಣ ಬೊಳ್ಳಿಲ್ಲಾಯ ಮಾತನಾಡಿ ಎಲ್ಲರ ಸಹಕಾರ ಕೋರಿದರು.
5 ಲಕ್ಷ ದೇಣಿಗೆ
ತನ್ನ ವೈಯುಕ್ತಿಕ ನೆಲೆಯಲ್ಲಿ ರೂ.5 ಲಕ್ಷ ದೇಣಿಗೆಯನ್ನು ನೀಡುವುದಾಗಿ ಶಾಸಕರು ತಿಳಿಸಿದರು.
ವೇದಿಕೆಯಲ್ಲಿ ಸಮಿತಿ ಅಧ್ಯಕ್ಷರ ಜಗನ್ಮೋಹನ್ ರೈ ಸೂರಂಬೈಲು, ಪ್ರ.ಕಾರ್ಯದರ್ಶಿ ಡಾ. ಅಖಿಲೇಶ್,ಕಾರ್ಯದರ್ಶಿ ಶುಭಕರ್ ರೈ ಉಪಸ್ಥಿತರಿದ್ದರು. ಶ್ರೀಪ್ರಸಾದ್ ಪಾಣಾಜೆ ಸ್ವಾಗತಿಸಿ ವಂದಿಸಿದರು.