
ಆಲಂಕಾರು: ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 23ನೇ ನೂತನ ಆಲಂಕಾರು ಶಾಖೆಯು ಶ್ರೀ ದುರ್ಗಾಟವರ್ ್ಸ ಆಲಂಕಾರಿನಲ್ಲಿ ನಾಳೆ ಜ.21ರಂದು ಪೂರ್ವಾಹ್ನ ಗಂಟೆ 10:30ಕ್ಕೆ ಉದ್ಘಾಟನೆ ನಡೆಯಲಿದೆ.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಭಾಗೀರಥಿ ಮುರುಳ್ಯ ರವರು ಶಾಖಾ ಕಚೇರಿಯನ್ನು ಉದ್ಘಾಟಿಸಲಿದ್ದು, ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದು, ಉದ್ಯಮಿ ಜಿ. ಕೃಷ್ಣಪ್ಪ ರಾಮಕುಂಜ ಅವರು ಗಣಕೀಕರಣ ವ್ಯವಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಆಲಂಕಾರು ಗ್ರಾ.ಪಂ. ಅಧ್ಯಕ್ಷ ಸುಶೀಲಾ ಗೌಡ ಪ್ರಥಮ ಠೇವಣಿ ಪತ್ರ ಹಾಗೂ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಪ್ರಥಮ ಉಳಿತಾಯ ಖಾತೆ ಪುಸ್ತಕ ವಿತರಿಸಲಿದ್ದಾರೆ. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು, ಕಡಬ ಸ್ಪಂದನಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕೇಶವ ಗೌಡ ಅಮೈ ಹಾಗೂ ಆಲಂಕಾರು ಶ್ರೀದುರ್ಗಾ ಟವರ್‍ಸ್‌ನ ಮಾಲಕ ರಾಧಾಕೃಷ್ಣ ರೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ, ಉಪಾಧ್ಯಕ್ಷ ಮೋಹನ್‌ರಾಮ್ ಸುಳ್ಳಿ, ನಿರ್ದೇಶಕ ಎ.ವಿ.ತೀರ್ಥರಾಮ, ಜಾಕೆ ಸದಾನಂದ ಗೌಡ, ನಿತ್ಯಾನಂದ ಮುಂಡೋಡಿ, ಚಂದ್ರಾ ಕೋಲ್ಚಾರ್, ಕೆ.ಸಿ ನಾರಾಯಣ ಗೌಡ, ಕೆ.ಸಿ ಸದಾನಂದ ಪಿ.ಎಸ್. ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ಎನ್.ಎಸ್, ಜಯಲಲಿತಾ ಕೆ.ಎಸ್, ನಳಿನಿ ಸೂರಯ್ಯ, ಲತಾ ಎಸ್ ಮಾವಜಿ, ಹೇಮಚಂದ್ರ ಐ.ಕೆ, ಶೈಲೇಶ್ ಅಂಬೆಕಲ್ಲು,ನವೀನ್ ಕುಮಾರ್ ಜೆ.ವಿ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.