ನಾಳೆ(ಜ.21) :ಪತ್ರಕರ್ತರಾದ ಸಿಶೇ ಕಜೆಮಾರ್, ಹಸೈನಾರ್ ಸುಳ್ಯ, ಶಿಕ್ಷಕ ಜಗನ್ನಾಥ ಅರಿಯಡ್ಕ ಸಹಿತ ಸಾಧಕರಿಗೆ ಮಂಗಳೂರಿನಲ್ಲಿ ಸೇವಾ ಗೌರವ ಪ್ರದಾನ

0

ಪುತ್ತೂರು: ಸ್ವರ ಮಾಧುರ್ಯ ಸಂಗೀತ ಬಳಗ ಪುತ್ತೂರು ಇದರ ವತಿಯಿಂದ ಜ.21 ರಂದು ಮಂಗಳೂರು ವಿಶ್ವವಿದ್ಯಾನಿಲಯ ರವೀಂದ್ರ ಕಲಾಭವನದಲ್ಲಿ ನಡೆಯುವ ಸಂವಿಧಾನ ಶಿಲ್ಪಿಯ ಪುನರಾವಲೋಕನ ವಿಶೇಷ ಶಿಬಿರ, ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್ ಜೊತೆ ವಿದ್ಯಾರ್ಥಿಗಳ ಸಂವಾದ, ಸಾಧಕರಿಗೆ ಸನ್ಮಾನ, ಉಪನ್ಯಾಸ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಐದು ಮಂದಿಗೆ ಸೇವಾ ಗೌರವ ಪ್ರದಾನ ನಡೆಯಲಿದೆ. ಸಮಾಜ ಸೇವೆಯಲ್ಲಿ ಬಿ.ಕೆ ಸೇಸಪ್ಪ ಬೆದ್ರಕಾಡ್, ಚಿತ್ರಕಲೆಯಲ್ಲಿ ಜಗನ್ನಾಥ್ ಅರಿಯಡ್ಕ, ಪತ್ರಿಕೋದ್ಯಮದಲ್ಲಿ ಪುತ್ತೂರು ಸುದ್ದಿ ಬಿಡುಗಡೆಯ ವರದಿಗಾರ ಸಿಶೇ ಕಜೆಮಾರ್ ಪುತ್ತೂರು ಮತ್ತು ಸುಳ್ಯ ಸುದ್ದಿಬಿಡುಗಡೆ ವರದಿಗಾರ ಹಸೈನಾರ್ ಜಯನಗರ ಸುಳ್ಯ, ಬಾಲ ಪ್ರತಿಭೆ ಅಸ್ಮಿತ್ ಎ.ಜೆ, ಸಂಗೀತ ಕ್ಷೇತ್ರದಲ್ಲಿ ಕೃಷ್ಣರಾಜ್ ಸುಳ್ಯ ಇವರುಗಳಿಗೆ ಸೇವಾ ಗೌರವ ಕಾರ್ಯಕ್ರಮ ನಡೆಯಲಿದೆ.


ಬೆಳಿಗ್ಗೆ ಜನಾರ್ದನ ಬಿ ಮತ್ತು ಬಳಗದವರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ಬಳಿಕ ಸಭಾ ಕಾರ್ಯಕ್ರಮ, ಡಾ.ಬಿ.ಆರ್ ಅಂಬೇಡ್ಕರ್ ವಿಚಾರ ಧಾರೆಗಳ ಕುರಿತು ಮೈಸೂರು ಧ್ವನಿ ಫೌಂಡೇಶನ್‌ನ ಸಂಸ್ಥಾಪಕಿ ಡಾ.ಶ್ವೇತ ಮೊಡಪ್ಪಾಡಿಯವರಿಂದ ಉಪನ್ಯಾಸ, ಅಪರಾಹ್ನ ವಿಧಾನ ಸಭಾ ಅಧ್ಯಕ್ಷ ಯು.ಟಿ ಖಾದರ್ ಅವರಿಂದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗದ ಸಲಹೆಗಾರ, ಕಾರ್ಯಕ್ರಮ ಸಂಘಟಕ ಜನಾರ್ದನ ಬಿ, ನಿರ್ದೇಶಕಿ ಪ್ರಮೀಳಾ ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ| ಹೆಚ್.ಸಿ ಮಹದೇವಪ್ಪ ಭಾಗಿ
ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ|ಹೆಚ್.ಸಿ ಮಹದೇವಪ್ಪರವರು ಉದ್ಘಾಟನೆ ಮಾಡಲಿದ್ದಾರೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ.

LEAVE A REPLY

Please enter your comment!
Please enter your name here