





ವಿಟ್ಲ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ರಥದ ಗದ್ದೆಯಲ್ಲಿ ವಿಆರ್ ಸಿ ವಿಟ್ಲ ಆಶ್ರಯದಲ್ಲಿ ರಮಾನಾಥ ವಿಟ್ಲ ಸಾರಥ್ಯದಲ್ಲಿ ಜ.20ರಂದು ವಿಟ್ಲೋತ್ಸವ ಪ್ರಸ್ತುತಗೊಂಡಿತು.
ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭರತನಾಟ್ಯ ಶಾಸ್ತ್ರೀಯ ಕ್ಷೇತ್ರದ ವಿದುಷಿ ನಯನ ಸತ್ಯನಾರಾಯಣ, ತೆಂಕು ತಿಟ್ಟು ಯಕ್ಷಗಾನ ಕ್ಷೇತ್ರದ ಸಾಧಕ ದಿನೇಶ್ ಶೆಟ್ಟಿಗಾರ್, ಶಿಕ್ಷಣ ಸಾಧಕಿ ನಿಂಪಾ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು.




ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ವಿಆರ್ ಸಿ ಕಳೆದ 30 ವರ್ಷಗಳಿಂದ ಸುತ್ತಮುತ್ತಲಿನ ವಿವಿಧ ಕ್ಷೇತ್ರಗಳ ನೂರಾರು ಉದಯೋನ್ಮುಖ ಸಾಧಕರನ್ನು, ಸಾಮಾಜಿಕ ಸೇವಾ ಕಾರ್ಯಕರ್ತರನ್ನು ಸನ್ಮಾನಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸುವಂತೆ ಮಾಡಿದೆ. ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಒದಗಿಸುವಂತಹ ಕಾರ್ಯ ಮಾಡುತ್ತಿದೆ ಎಂದರು.
ಕೃಷ್ಣಯ್ಯ ಬಲ್ಲಾಳ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು.
ಕೆ ಎಸ್ ಆರ್ ಟಿ ಸಿ ಅಧಿಕಾರಿ ನರಸಿಂಹ ವರ್ಮ ವಿಟ್ಲ, ಕಲಾ ಪೋಷಕ ದಿನಕರ ಭಟ್ ಮಾವೆ ಭಾಗವಹಿಸಿದ್ದರು. ವಿಆರ್ ಸಿ ಸಂಚಾಲಕ ರಮಾನಾಥ ವಿಟ್ಲ ಸ್ವಾಗತಿಸಿದರು. ವಕೀಲ ನಟೇಶ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಸಹಕರಿಸಿದರು.






ಪುತ್ತೂರು ಶ್ರೀ ದೇವಿ ನೃತ್ಯಾರಾಧನ ಕಲಾಕೇಂದ್ರದ ನೃತ್ಯ ಗುರು ವಿದುಷಿ ರೋಹಿಣಿ ಉದಯ್ ಅವರ ಶಿಷ್ಯೆಯರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಿತು.
ಸಭೆಯ ಬಳಿಕ ವಿಟ್ಲ ಶಿವಂ ಡ್ಯಾನ್ಸ್ ಅಕಾಡೆಮಿಯಿಂದ ಡ್ಯಾನ್ಸ್, ಸುಪ್ರೀತ್ ಸಪಳಿಗ, ನಂದಿನಿ ಗಾಣಿಗ ಅವರಿಂದ ಹಾಡು ಪ್ರಸ್ತುತಗೊಂಡಿತು. ಸುನಿಲ್ ನೆಲ್ಲಿಗುಡ್ಡೆ ತಂಡದವರಿಂದ ತೆಲಿಕೆದ ಬರ್ಸ ಪ್ರದರ್ಶನಗೊಂಡಿತು.ಕೀರ್ತಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ನೂರಾರು ಕಲಾಭಿಮಾನಿಗಳು ನೆರೆದಿದ್ದರು.









