ಪುತ್ತೂರು: ಪೆರ್ಲಂಪಾಡಿಯ ಕರ್ತಡ್ಕ ಎಂಬಲ್ಲಿ ಕಾಡಾನೆ ಉಪಟಳ ಮುಂದುವರಿದಿದೆ. ಕಳೆದ ರಾತ್ರಿ ಸ್ಥಳೀಯ ಗ್ರಾಮಸ್ಥರ ಕೃಷಿ ತೋಟಕ್ಕೆ ನುಗ್ಗದ ಆನೆ ತೆಂಗಿನ ಗಿಡ ಮತ್ತು ಅಡಿಕೆ ಗಿಡಗಳಿಗೆ ಹಾನಿ ಮಾಡಿದೆ. ಮರವೊಂಕ್ಕೆ ತಿವಿದು ಹಾನಿಗೊಳಿಸಿರುವ ಕಾಡಾನೆ ಮುಂಜಾನೆ ವೇಳೆ ಘೀಳಿಡುತ್ತಿರುವ ಶಬ್ದವನ್ನು ಸ್ಥಳೀಯರು ಕೇಳಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಲ್ಲಿ 3ನೇ ಬಾರಿ ಈ ಭಾಗದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಭಯಭೀತರಾಗಿರುವ ಸ್ಥಳೀಯರು ಕಾಡಾನೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಶಾಸಕರು ಈ ಕುರಿತು ಗಮನ ಹರಿಸಿ ಕಾಡಾನೆಯನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದೆ ನಡೆಯಲಿರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.