





ಪುತ್ತೂರು: ಬನ್ನೂರು ಶ್ರೀ ಮಹಾಲಕ್ಷ್ಮಿ ಮಂದಿರದಲ್ಲಿ ಮಹಾಲಕ್ಷ್ಮಿ ವಿಗ್ರಹಕ್ಕೆ ಭಕ್ತರಿಂದ ರಜತ ಕವಚ ಮತ್ತು ಚಿನ್ನದ ಕರಿಮಣಿ ಸಮರ್ಪಣೆಯೊಂದಿಗೆ ಪ್ರತಿಷ್ಠಾ ವಾರ್ಷಿಕೋತ್ಸವವು ಜ.23ರಂದು ನಡೆಯಿತು.
ಬೆಳಿಗ್ಗೆ ಶ್ರೀ ಮಹಾಲಕ್ಷ್ಮೀ ದೇವರಿಗೆ ರಜತ ಕವಚ ಮತ್ತು ಚಿನ್ನದ ಕರಿಮಣಿಯನ್ನು ಸಮರ್ಪಣೆ ಮಾಡಲಾಯಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.











