ಖಾಸಗಿಯಾಗಿ 5 ಸಾವಿರ ಫೀಸ್ ಇರುವ ರಕ್ತ ಪರೀಕ್ಷೆ ಉಚಿತ: ಜನತೆಗೆ ಶಾಸಕರಿಂದ ಅಭೂತಪೂರ್ವ ಕೊಡುಗೆ
ಪುತ್ತೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ರೈ ಎಸ್ಟೇಟ್ಸ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ಕಾರ್ಮಿಕರು ಮತ್ತು ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತ ಪರೀಕ್ಷೆಯು ಜ.28 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರತನಕ ನಡೆಯಲಿದೆ.
ಶಿಬಿರದಲ್ಲಿ ಭಾಗವಹಿಸುವ ಕಟ್ಟಡ ಕಾರ್ಮಿಕರು ನೋಂದಾವಣೆ ಕಾರ್ಡು,ಆಧಾರ್ ಕರ್ಡು, ರೇಶನ್ ಕಾರ್ಡು ಗಳನ್ನು ತರಬೇಕಾಗಿರುತ್ತದೆ. ಶಿಬಿರದಲ್ಲಿ ಪುತ್ತೂರು, ಸುಳ್ಯ, ಕಡಬ ಮತ್ತು ಬಂಟ್ವಾಳ ತಾಲೂಕಿನ ವ್ಯಾಪ್ತಿಯ ಕಟ್ಟಡ ಕಾರ್ಮಿಕರು ಮತ್ತು ಇತರೆ ಅವಲಂಬಿತರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ರಕ್ತ ಪರೀಕ್ಷೆ ಇದ್ದು ಸುಮಾರು 19 ವಿವಿಧ ರಕ್ತ ಪರೀಕ್ಷೆಗಳು ನಡೆಯಲಿದ್ದು ಖಾಸಗಿಯಾಗಿ 4 ರಿಂದ 5 ಸಾವಿರ ರೂ ಖರ್ಚು ತಗಲುವ ರಕ್ತ ಪರೀಕ್ಷೆಯನ್ನು ಉಚಿತವಾಗಿ ಮಾಡಿಕೊಡಲಾಗುತ್ತದೆ ಎಂದು ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ಆಧಾರ್ ನೋಂದಣಿ ಹಾಗೂ ತಿದ್ದುಪಡಿ
ಇದೇ ಸಂದರ್ಭದಲ್ಲಿ ಆಧಾರ್ ಕಾರ್ಡು ನೋಂದಾವಣೆ ಮತ್ತು ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಆಧಾರ್ ಕಾರ್ಡು ಜನ್ಮ ದಿನಾಂಕ ತಿದ್ದುಪಡಿಗೆ ಬೇಕಾದ ದಾಖಲೆಗಳು: ಜನನ ಪ್ರಮಾಣಪತ್ರ, ಪಾಸ್‌ಪೋರ್ಟು, ಎಸ್‌ಎಸ್‌ಎಲ್‌ಸಿ ಮೂಲ ಅಂಕಪಟ್ಟಿ, ಮತ್ತು ಸರ್ವಿಸ್ ಫೋಟೋ ಐಡಿ ಕಾರ್ಡು
ಆಧಾರ್‌ಕಾರ್ಡಿನಲ್ಲಿ ಹೆಸರು ಬದಲಾವಣೆಗೆ ದಾಖಲೆಗಳು: ವಾಹನಚಾಲನಾ ಪ್ರಮಾಣ ಪತ್ರ, ಪಾಸ್‌ಪೋರ್ಟು, ಎಸ್‌ಎಸ್‌ಎಲ್‌ಸಿ ಮೂಲಂಕಪಟ್ಟಿ, ಮದುವೆ ಪ್ರಮಾಣಪತ್ರ, ಪಾನ್‌ಕಾರ್ಡು, ರೇಶನ್ ಕಾರ್ಡ್, ವೋಟರ್ ಐಡಿ,
ವಿಳಾಸ ಬದಲಾವಣೆಗೆ: ಪಾಸ್‌ಪೋರ್ಟು, ವಾಹನ ಚಾಲನಾ ಪ್ರಮಾಣ ಪತ್ರ, ರೇಶನ್ ಕಾರ್ಡು, ವೋಟರ್ ಐಡಿ, ಬ್ಯಾಂಕ್ ಪಾಸ್ ಬುಕ್, ಇನ್ಸುರೆನ್ಸ್ ಪಾಲಿಸಿ ಮತ್ತು ವಾಸ್ತವ್ಯ ಪ್ರಮಾಣಪತ್ರ
ಮಕ್ಕಳಿಗೆ ಆಧಾರ್ ಮಾಡಿಸಲು: ಜನ್ಮ ದಾಖಲೆ, ತಂದೆ ತಾಯಿ ಆಧಾರ್ ಕಾರ್ಡು, ಮತ್ತು ತಂದೆ ತಾಯಿ ಮಗುವಿನೊಂದಿಗೆ ಬರಬೇಕು. ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಮನವಿ ಮಾಡಿದ್ದಾರೆ.