ನಾಳೆ(ಜ.26): ಕುಂಬ್ರ ಮರ್ಕಝುಲ್ ಹುದಾದಲ್ಲಿ ‘ಸಿಲ್ವರಿಯಂ’ ಘೋಷಣಾ ಸಮಾವೇಶ, ಕಟ್ಟಡ ಶಿಲಾನ್ಯಾಸ-ಸಯ್ಯಿದ್ ಅಲೀ ಬಾಫಖೀ ತಂಙಳ್ ಆಗಮನ

0

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು 23 ಯಶಸ್ವೀ ವರ್ಷಗಳನ್ನು ಪೂರೈಸಿ 24ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ ಸಿಲ್ವರಿಯಂ ಎಂಬ ಹೆಸರಲ್ಲಿ ಎರಡು ವರ್ಷಗಳ ಕಾಲ ಬೆಳ್ಳಿ ಹಬ್ಬ ಆಚರಿಸಲು ನಿರ್ಧರಿಸಲಾಗಿದ್ದು ಇದರ ಘೋಷಣೆ ಹಾಗೂ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯ ಜ.26ರಂದು ಸಂಜೆ ಕುಂಬ್ರ ಮರ್ಕಝ್ ಆವರಣದಲ್ಲಿ ನಡೆಯಲಿದೆ. ಶಿಲಾನ್ಯಾಸ ಹಾಗೂ ಸಿಲ್ವರಿಯಂನ ಉದ್ಘಾಟನೆಯನ್ನು ವಿಶ್ವ ವಿಖ್ಯಾತ ಮರ್ಕಝ್ ಸಖಾಫತಿ ಸ್ಸುನ್ನಿಯ್ಯದ ಅಧ್ಯಕ್ಷ ಸಮಸ್ತ ಮುಶಾವರದ ಉಪಾಧ್ಯಕ್ಷ ಅಮೀನುಶ್ಶರೀಅ ಸಯ್ಯಿದ್ ಅಲೀ ಬಾಫಖೀ ತಂಙಳ್ ನಿರ್ವಹಿಸಲಿದ್ದಾರೆ. ಅದರೊಂದಿಗೆ ಸಂಸ್ಥೆಯ ನೂತನ ಲೋಗೊವನ್ನು ಪ್ರಕಾಶನ ಮಾಡಲಾಗುವುದು.

ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಅರಿಯಡ್ಕ ಅಧ್ಯಕ್ಷತೆ ವಹಿಸಲಿದ್ದು ಉಪಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಅನಿವಾಸಿ ಉದ್ಯಮಿ, ಸೌದಿ ಅರೇಬಿಯಾ ಜುಬೈಲ್‌ನ ಆಲ್ ಮುಝೈನ್ ಉದ್ಯಮ ಸಂಸ್ಥೆಯ ಅಧ್ಯಕ್ಷ ಹಾಜಿ ಝಕರಿಯಾ ಜೋಕಟ್ಟೆ, ಕಾಟಿಪಳ್ಳ ಮಿಸ್ಬಾಹ್ ಮಹಿಳಾ ಕಾಲೇಜಿನ ಅಧ್ಯಕ್ಷ ಹಾಜಿ ಮಮ್ತಾಝ್ ಅಲಿ ಕೃಷ್ಣಾಪುರ, ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಅಧ್ಯಕ್ಷ ಹಾಜಿ ಕೆ ಪಿ ಅಹ್ಮದ್ ಆಕರ್ಷಣ್, ದ.ಕ.ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮರ್ಕಝುಲ್ ಹುದಾ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಫಾರೂಕ್ ಕನ್ಯಾನ, ಉದ್ಯಮಿ, ಸುನ್ನೀ ಮುಂದಾಳು ಹಾಜಿ ಶಕೀರ್ ಹೈಸಮ್, ಮೀಫ್ ಉಪಾಧ್ಯಕ್ಷ ಕೆ ಎಂ ಮುಸ್ತಫಾ ಸುಳ್ಯ ಹಾಗೂ ಇತರ ಪ್ರಮುಖರು, ಅನಿವಾಸಿ ಘಟಕಗಳ ನಾಯಕರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಶೀರ್ ಇಂದ್ರಾಜೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here