ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರುಗಳ ಕಾಯಿದೆ ಜಾರಿಗೆ ಪುತ್ತೂರು ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ‍್ಸ್ ಆಗ್ರಹ

0

ಪುತ್ತೂರು: ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರುಗಳ ಕಾಯ್ದೆ (ಕೆ.ಪಿ.ಸಿ.ಇ.ಎ.) 2024 ಜಾರಿಯಾಗಬೇಕೆಂಬ ನಿಟ್ಟಿನಲ್ಲಿ ಸರಕಾರಕ್ಕೆ ಈಗಗಾಲೇ 5ಲಕ್ಷ ಸಿವಿಲ್ ಇಂಜಿನಿಯರ್‌ಗಳು ಮನವಿಯನ್ನು ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರಕಾರದ ನೇತೃತ್ವದಲ್ಲಿ ನಾಲ್ಕು ಕಂದಾಯ ವಿಭಾಗಗಳಲ್ಲಿ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಜ.29ರಂದು ಮೈಸೂರಿನಲ್ಲಿ ಕಾರ್ಯಾಗಾರ ನಡೆಯುತ್ತಿದ್ದು, ಪುತ್ತೂರು ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್‌ನಿಂದ ಭಾಗವಹಿಸಲಿದ್ದೇವೆ ಎಂದು ಎಸೋಸಿಯೇಶನ್‌ನ ಪುತ್ತೂರು ಸೆಂಟರ್ ಅಧ್ಯಕ್ಷ ಪ್ರಮೋದ್ ಕುಮಾರ್ ಪತ್ರಿಕಾಗೊಷ್ಠಿಯಲ್ಲಿ ಹೇಳಿದ್ದಾರೆ.

ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಇಂಜಿನಿಯರ‍್ಸ್ ಪುತ್ತೂರು ಇದರ ಕೋಶಾಧಿಕಾರಿ ಚೇತನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರಶೇಖರ್ ಆಳ್ವ, ಶಿವರಾಮ್, ರಾಜಶೇಖರ್ ಪ್ರಶಾಂತ್, ನಮಿತಾ ಕುಮಾರಿ, ದಿನೇಶ್ ವಿ ಭಟ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here