ಪುತ್ತೂರು: ಜ.25 ರಂದು ಮೃತಪಟ್ಟ ಅರಿಯಡ್ಕ ಗ್ರಾಮದ ಕುಂಜೂರು ಪನೆಕ್ಕಲ್ ನಿವಾಸಿ ರವೀಂದ್ರ ಮಣುಯಾಣಿಯವರ ಮನೆಗೆ ಶಾಸಕ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ರವೀಂದ್ರ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕರು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಮೃತ ಕಾರ್ಯಕರ್ತನ ಮಕ್ಕಳ ವಿದ್ಯಾಬ್ಯಾಸಕ್ಕೆ ನೆರವು ನೀಡುವುದಾಗಿ ಶಾಸಕರು ತಿಳಿಸಿದರು.