ಪುಣಚ : ಅಜ್ಜಿನಡ್ಕ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಶಾಲಾ ಮಕ್ಕಳ ಪೋಷಕರಿಗೆ ಒಂದು ದಿನದ ಬುನಾದಿ ಕಲಿಕೆಯ ಪರಿಚಯ ಕಾರ್ಯಕ್ರಮ ಪುಣಚ ಗ್ರಾ.ಪಂ. ಸಭಾಭವನದಲ್ಲಿ ಜ.30ರಂದು ನಡೆಯಿತು.
ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಯಾನೆ ಯಶೋಧ ಕಾರ್ಯಕ್ರಮ ಉದ್ಘಾಟಿಸಿದರು.ಬಂಟ್ವಾಳ ಬಿಐಇಆರ್‌ಟಿ ಸುರೇಖಾ ಯಳವಾರ ಹಾಗೂ ಡಾ.ನಿವೇದಿತ ತಿಲಕ್ ಮಾತನಾಡಿ ಮಕ್ಕಳೊಡನೆ ಪೋಷಕರ ಪಾತ್ರ, ಮಕ್ಕಳ ಬಗ್ಗೆ ಕಾಳಜಿ, ಶಾಲೆಯೊಂದಿಗೆ ಪೋಷಕರ ಸಂಬಂಧ, ಮಗು ಗಳಿಸಬೇಕಾದ ಕಲಿಕಾ ಫಲಗಳು ವಿಷಯದ ಕುರಿತು ಪೋಷಕರಿಗೆ ತರಬೇತಿ ನೀಡಿದರು.
ಪುಣಚ ಗ್ರಾ.ಪಂ.ಮಾಜಿ ಅಧ್ಯಕ್ಷ ರಾಮಕೃಷ್ಣ ಬಿ. ಮೂಡಂಬೈಲು, ಸದಸ್ಯ ತೀರ್ಥರಾಮ ಹಾಗೂ ಕ್ಲಸ್ಟರ್ 6 ಸರಕಾರಿ ಶಾಲೆಗಳ ಪೋಷಕರು ಕಾರ್ಯಗಾರದಲ್ಲಿ ಭಾಗವಹಿಸಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಪುಷ್ಪಬಲ್ಲಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೃಷ್ಣಗಿರಿ ಶಾಲಾ ಶಿಕ್ಷಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.