ಪುತ್ತೂರು: ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆದ ಉಡುಪಿ ಪ್ರಾದೇಶಿಕ ಭಾಗದ 1777ನೇ ಮದ್ಯವರ್ಜನ ಶಿಬಿರದ ಮಾಸಿಕ ಸಭೆಯು ಯೋಜನೆ ಸಭಾಭವನದಲ್ಲಿ ನೆರವೇರಿತು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನಿತ್ತು ಶಿಬಿರಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು, ಸಮಿತಿಯ ಗೌರವ ಸಲಹೆಗಾರ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರು ನವಜೀವನ ಸದಸ್ಯರ ಉತ್ತಮ ಜೀವನಕ್ಕೆ ಪೂರಕವಾದ ಮಾರ್ಗದರ್ಶನ ನೀಡಿದರು, ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯ ಡಾ. ನಾರಾಯಣ ಭಟ್ ಪುತ್ತೂರು ಶುಭ ಹಾರೈಸಿದರು, ಒಟ್ಟು 87 ಜನ ಶಿಬಿರಾರ್ಥಿಗಳು ದಾಖಲಾಗಿದ್ದು ಅದರಲ್ಲಿ ಪುತ್ತೂರು ತಾಲೂಕಿನ 71 ಜನ, ಕಡಬ ಮತ್ತು ಸುಳ್ಯ ತಾಲ್ಲೂಕಿನ 8 ಜನ, ಕಾಸರಗೋಡು ತಾಲೂಕಿನವರು 8 ಜನ, ಕಡಬ ಮತ್ತು ಸುಳ್ಯದಿಂದ 7 ಜನ ಸಭೆಗೆ ಹಾಜರಾಗಿರುತ್ತಾರೆ. ಕಾಸರಗೋಡುನಿಂದ 6 ಜನ, ಪುತ್ತೂರು ತಾಲೂಕಿನ 59 ಜನ ಸಭೆಗೆ ಹಾಜರಾಗಿದ್ದು, ಒಟ್ಟು 72 ಜನ ಸದಸ್ಯರು ಹಾಜರಾಗಿರುತ್ತಾರೆ. ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿಯವರು ವಲಯವಾರು ಹಾಜರಾತಿ ಮತ್ತು ನವಜೀವನ ಸಮಿತಿ ಸಭೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಕಾರ್ಯಕ್ರಮದಲ್ಲಿ ಸರ್ವಶಕ್ತಿ ಸಂಘದ ಮೋನಪ್ಪ ಪೂಜಾರಿ ಹಾಗೂ ಸತ್ಯಶ್ರೀ ಸಂಘದ ತನಿಯ ರವರಿಗೆ ವೀಲ್‌ಚೇರ್ ವಿತರಿಸಲಾಯಿತು.
ಸಂಬಂಧಪಟ್ಟ ಪೋಷಕರು ಉಪಸ್ಥಿತರಿದ್ದು ಅನುಭವಗಳನ್ನು ಹಂಚಿಕೊಳ್ಳಲಾಯಿತು. ಎಲ್ಲಾ ಪೋಷಕರು ವಾರದ ಸಭೆಗಳನ್ನು ಸಮರ್ಪಕವಾಗಿ ನಡೆಸುತ್ತಿದ್ದು ಅವರನ್ನು ಅಭಿನಂದಿಸಲಾಯಿತು. ನವ ಜೀವನ ಸಮಿತಿ ಸದಸ್ಯರು ಹಾಗೂ ಅವರ ಮನೆಯವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ತಾಲೂಕು ಯೋಜನಾಧಿಕಾರಿ ಶಶಿಧರ್ ಸ್ವಾಗತಿಸಿದರು, ಉಮೇಶ್ ನಿರೂಪಿಸಿದರು, ಮೇಲ್ವಿಚಾರಕರಾದ ಶ್ರುತಿ ವಂದನಾರ್ಪಣೆ ಮಾಡಿದರು.