ಪುತ್ತೂರು: ತೇಜಸ್ ಫ್ಯಾಶನ್ ಡಿಸೈನ್ ಲೇಡೀಸ್ ಟೈಲರ್ ಫೆ.5ರಂದು ಸ್ಥಳಾಂತರಗೊಂಡು ಮುಖ್ಯರಸ್ತೆಯ ಜಿ.ಎಲ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.
ವೇ.ಮೂ. ಶ್ರೀಹರಿಪ್ರಸಾದ್ ವೈಲಾಯರವರ ನೇತೃತ್ವದಲ್ಲಿ ಗಣಪತಿ ಹೋಮ, ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಹೇರಳೆ, ದೇವಾ ಟ್ರೇಡರ‍್ಸ್ ಮಾಲಕ ಟಿ ವಿ ರವೀಂದ್ರನ್, ಅಚ್ಚುತ ನಾೖಕ್, ಉದಯ ಕುಮಾರ್ ಹೆಚ್, ಸಂಧ್ಯಾ ಕಜೆ, ರಾಮ ಪ್ರಕಾಶ್ ಜ್ಯುವೆಲ್ಲರ್ ಮಾಲಕ ಅಶೋಕ್ ಆಚಾರ್ಯ ಕೃಷ್ಣ ನಗರ, ಸ್ಟೇಟ್ ಟೈಲರ್ ಎಸೋಸಿಯೇಶನ್ ಲೆಕ್ಕ ಪರಿಶೋಧಕ ರಘುನಾಥ್ ಬಿ ಪುತ್ತೂರು, ಟೈಲರ್ ಎಸೋಸಿಯೇಶನ್ ನಿಕಟಪೂರ್ವ ಅಧ್ಯಕ್ಷ ಜಯರಾಮ ಬಿ.ಎನ್, ಟೈಲರ್ ಎಸೋಸಿಯೇಶನ್ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಜಯಂತ್ ಉರ್ಲಾಂಡಿ, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಯಶೋಧರ್ ಜೈನ್ ದರ್ಬೆ, ಬ್ರಿಯಾನ್ ಮಾಲಕ ಕ್ಲೆಮೆಂಟ್ ಪ್ರವೀಣ್ ಮಾರ್ಟಿಸ್ ಮರೀಲ್, ಅಶೋಕ್ ಕುಲಾಲ್ ಮುರ, ಜಯಂತ್ ಉಪ್ಪಿನಂಗಡಿ, ರಮೇಶ್ ಕೆಮ್ಮಾಯಿ, ನ್ಯಾಯವಾದಿ ಸೂರ್ಯ ನಾರಾಯಣ ಎನ್.ಕೆ, ಟೈಲರ್ ಎಸೋಸಿಯೇಶನ್ ಕ್ಷೇತ್ರ ಸಮಿತಿ ಕಾರ್ಯದರ್ಶಿ ಚಿತ್ರಾ ಬಿ.ಸಿ, ಕೋಶಾಧಿಕಾರಿ ಪರಮೇಶ್ವರ ಕಾಣಿಯೂರು, ಟೈಲರ್ ಎಸೋಸಿಯೇಶನ್ ಜಿಲ್ಲಾ ಸದಸ್ಯ ಶಂಭು ಬಲ್ಯಾಯ ಮುಂಡೋಡಿ, ವಿಜಯಲಕ್ಷ್ಮೀ ಗಂಗಾಧರ್ ನೆಲ್ಲಿಕಟ್ಟೆ, ಟೈಲರ್ ಎಸೋಸಿಯೇಶನ್ ನಗರ ವಲಯಾಧ್ಯಕ್ಷ ದಿನೇಶ್ ಸಂಪ್ಯ, ಉಷಾ, ಸ್ವಾತಿ, ಭಾರತಿ ಹರೀಶ್ ಎಳ್ಮುಡಿ ಪುತ್ತೂರು ಉಪಸ್ಥಿತರಿದ್ದರು. ಅಂಗಡಿ ಮಾಲಕಿ ಟೈಲರ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರ ಅಧ್ಯಕ್ಷೆ ಉಮಾ ಯು ನಾೖಕ್, ಪತಿ ಉದಯ ಶಂಕರ್ ನಾೖಕ್, ಪುತ್ರ ನ್ಯಾಯವಾದಿ ತೇಜಸ್ ನಾೖಕ್ ಕೊಂಬೆಟ್ಟು ಗ್ರಾಹಕರನ್ನು ಬರಮಾಡಿಕೊಂಡರು.
ನಮ್ಮಲ್ಲಿ ಸಾರಿ, ಬ್ಲೌಸ್, ಹ್ಯಾಂಡ್ ಎಂಬ್ರಾಯಿಡರಿ ವರ್ಕ್, ಮೆಶಿನ್ ಎಂಬ್ರಾಯಿಡರಿ ವರ್ಕ್, ಚೂಡಿದಾರ್, ಸಲ್ವಾರ್, ಸ್ಕರ್ಟ್, ಪಾರ್ಟಿವೇರ್ ಫ್ರಾಕ್, ಯೂನಿಫಾರಂ, ಸಾರಿಗೊಂಡೆ, ಸಾರಿಫಾಲ್, ಮಹಿಳೆಯರ ಹಾಗೂ ಮಕ್ಕಳ ಉಡುಪುಗಳನ್ನು ಕ್ಲಪ್ತ ಸಮಯದಲ್ಲಿ ಹೊಲಿದು ಕೊಡಲಾಗುವುದು ಎಂದು ಮಾಲಕಿ ಟೈಲರ್ ಅಸೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷೆಯಾಗಿರುವ ಉಮಾ ಯು ನಾೖಕ್ ತಿಳಿಸಿದ್ದಾರೆ.