ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.5ರಂದು ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಪಾರ್ತಿಸುಬ್ಬ ವಿರಚಿತ ‘ವಾಲಿ ಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಇರ್ದೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್,ಪ್ರೊ.ದಂಬೆ ಈಶ್ವರ ಶಾಸ್ತ್ರೀ, ಮುರಳೀಧರ ಕಲ್ಲೂರಾಯ,ಅಚ್ಯುತ ಪಾಂಗಣ್ಣಾಯ ಮಾ.ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಪೂಕಳ ಲಕ್ಷ್ಮೀ ನಾರಾಯಣ ಭಟ್ ಮತ್ತು ಶುಭಾ ಅಡಿಗ ( ಶ್ರೀ ರಾಮ), ಗುಂಡ್ಯಡ್ಕ ಈಶ್ವರ ಭಟ್ (ವಾಲಿ), ಗುಡ್ಡಪ್ಪ ಬಲ್ಯ ಮತ್ತು ಜಯಂತಿ ಹೆಬ್ಬಾರ್ (ಸುಗ್ರೀವ), ಭಾಸ್ಕರ ಬಾರ್ಯ (ಲಕ್ಷ್ಮಣ), ಮಾಂಬಾಡಿ ವೇಣುಗೋಪಾಲ್ ಭಟ್ (ತಾರೆ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ರಂಗನಾಥ್ ರಾವ್ ವಂದಿಸಿದರು.

LEAVE A REPLY

Please enter your comment!
Please enter your name here