ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ-ಸಂಧ್ಯಾ ಪಿ
ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪದವಿಪೂರ್ವ ವಿಭಾಗದಲ್ಲಿ ವಾರ್ಷಿಕೋತ್ಸವ ಪ್ರಯುಕ್ತ `ಸಂಭ್ರಮ’ ಕಾರ್ಯಕ್ರಮ ನಡೆಯಿತು. ಉದ್ಘಾಟಿಸಿದ ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಸಂಧ್ಯಾ ಪಿ ಮಾತನಾಡಿ, ನಮ್ಮ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಣಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕ್ರತಿಕ ಕಾರ್ಯಕ್ರಮ, ವ್ಯಕ್ತಿತ್ವ ವಿಕಸನ ಮುಂತಾದವುಗಳಿಗೆ ನೀಡುತ್ತಿದ್ದು ಇದರಿಂದ ವಿದ್ಯಾರ್ಥಿನಿಯರು ಮತ್ತು ಪೋಷಕರು ಸಂತೋಷಗೊಂಡಿದ್ದಾರೆ, ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಮಾತ್ರ ಅವರು ಸಾಧನೆ ಮಾಡಲು ಸಾಧ್ಯ, ಈ ನಿಟ್ಟಿನಲ್ಲಿ ನಾವು ಎಲ್ಲಾ ವಿಧದಲ್ಲೂ ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು. ಪದವಿ ವಿಭಾಗದ ಪ್ರಾಂಶುಪಾಲ ಮುಹಮ್ಮದ್ ಮನ್ಸೂರ್ ಕಡಬ, ಮ್ಯಾನೇಜರ್ ಉಮರ್ ಅಮ್ಜದಿ ಕುಕ್ಕಿಲ ಶುಭ ಹಾರೈಸಿದರು.
ಸ್ಪರ್ಧಾ ವಿಜೇತರ ವಿವರ:
ಸ್ಕಿಪಿಂಗ್: ಆಯಿಷತಿಲ್ ಅಂಶೀರಾ ಮಡಿಕೇರಿ (ದ್ವಿತೀಯ ವಾಣಿಜ್ಯ) ಪ್ರಥಮ, ಕೆ.ಎ ನಿದಾ ಫಾತಿಮ ಸೋಮವಾರಪೇಟೆ (ಪ್ರಥಮ ವಾಣಿಜ್ಯ)ದ್ವಿತೀಯ, ಸಹನಾ ಶಿರಿನ್ ವಿರಾಜೆಪೇಟೆ( ಪ್ರಥಮ ಕಲಾ)ತೃತೀಯ.
ಹಗ್ಗ ಜಗ್ಗಾಟ: ಫಾತಿಮಾ ನಶ್ವಿ ಉಪ್ಪಿನಂಗಡಿ ತಂಡ ಪ್ರಥಮ, ನಫೀಸತ್ ಮುಪೀಝ ಒಕ್ಕೆತ್ತೂರು ತಂಡ ದ್ವಿತೀಯ.
ಶಾಟ್ ಪುಟ್: ಫಾತಿಮತುಲ್ ಝುರಾ ಸೋಮವಾರಪೇಟೆ(ಪ್ರಥಮ ವಾಣಿಜ್ಯ)ಪ್ರಥಮ, ಸುಹಾನ ಕೆ.ಐ ಮಡಿಕೇರಿ (ಪ್ರಥಮ ಕಲಾ)ದ್ವಿತೀಯ, ಝುಬೇದಾಬಿ ಅರಸಿಕೆರೆ(ದ್ವಿತೀಯ ವಿಜ್ಞಾನ)ತೃತೀಯ.
ಥ್ರೋ ಬಾಲ್: ಆಯಿಷತ್ ಅಂಶೀರಾ ಮಡಿಕೇರಿ ತಂಡ ಪ್ರಥಮ, ಅಝ್ಮಿಯಾ ಎಚ್ ಆರ್ ಮಡಿಕೇರಿ ತಂಡ ದ್ವಿತೀಯ.
ಪೇಪರ್ ಕ್ರಾಫ್ಟ್: ಕಲಂದರ್ ಬೀಬಿ ವಿಟ್ಲ(ದ್ವಿತೀಯ ವಾಣಿಜ್ಯ) ಪ್ರಥಮ, ಫಾತಿಮಾ ಶಮ್ನ ವಿ.ಎಸ್ ಕೊಡಗು(ದ್ವಿತೀಯ ವಾಣಿಜ್ಯ)ದ್ವಿತೀಯ, ಫಾತಿಮಾ ಇಫ್ರತ್ ಪೆರಿಯಡ್ಕ(ದ್ವಿತೀಯ ವಾಣಿಜ್ಯ)ತೃತೀಯ.
ಇಂಗ್ಲಿಷ್ ಭಾಷಣ: ಫಾತಿಮಾ ಸುಹಾ ಪಡೀಲು(ದ್ವಿತೀಯ ವಿಜ್ಞಾನ) ಪ್ರಥಮ, ಹಲೀಮ ಫಿದಾ ಉಪ್ಪಿನಂಗಡಿ(ದ್ವಿತೀಯ ವಾಣಿಜ್ಯ) ದ್ವಿತೀಯ, ಫಾತಿಮತ್ ಮುಬಶ್ಶಿರ ಈಶ್ವರಮಂಗಲ(ದ್ವಿತೀಯ ವಿಜ್ಞಾನ)ತೃತೀಯ.
ಕನ್ನಡ ಭಾಷಣ: ಮರಿಯಂ ರಫಾನ ಬೆಳಂದೂರು(ಪ್ರಥಮ ವಿಜ್ಞಾನ)ಪ್ರಥಮ, ಆಯಿಷತ್ ಶಹಮಾ ಸರ್ವೆ(ದ್ವಿತೀಯ ವಾಣಿಜ್ಯ)ದ್ವಿತೀಯ, ಆಯಿಷತ್ ನಝೀಲ ಇರ್ದೆ(ಪ್ರಥಮ ವಾಣಿಜ್ಯ)ತೃತೀಯ.
ಆಮಂತ್ರಣ ಪತ್ರಿಕೆ ತಯ್ಯಾರಿ: ಫಾತಿಮತ್ ಸಾಬಿರ ಮತ್ತು ಬಳಗ, ಫಾತಿಮಾ ಇಫ್ರತ್ ಮತ್ತು ಬಳಗ ಪ್ರಥಮ, ಝೈನಬಾ ತನ್ಶಾ ಸಾಲ್ಮರ ಮತ್ತು ಬಳಗ, ಆಯಿಷತ್ ಅಂಶೀರಾ ಮಡಿಕೇರಿ ಮತ್ತು ಬಳಗ ದ್ವಿತೀಯ, ಫಾತಿಮಾ ಸುಹಾ ಪಡೀಲು ಬಳಗ ತೃತೀಯ.
ಗಾಂಧೀ ಜಯಂತಿ ಕುರಿತು ರಸಪ್ರಶ್ನೆ: ಅಝ್ಮಿಯಾ ಎಚ್ ಆರ್ ಮಡಿಕೇರಿ(ದ್ವಿತೀಯ ವಿಜ್ಞಾನ) ಪ್ರಥಮ, ಫರ್ಹತ್ ಎಂ ಎ ಕೊಡಗು (ಪ್ರಥಮ ಕಾಮರ್ಸ್)ದ್ವಿತೀಯ, ಫಾತಿಮಾ ಇಫ್ರತ್ ಪೆರಿಯಡ್ಕ(ದ್ವಿತೀಯ ವಾಣಿಜ್ಯ)ತೃತೀಯ.
ದೇಶಭಕ್ತಿ ಗೀತೆ: ಫಾತಿಮತ್ ಶಿಫಾ ಕೆ ಮಾಡನ್ನೂರು (ದ್ವಿತೀಯ ವಾಣಿಜ್ಯ) ಟೀಂ ಪ್ರಥಮ, ಫಾತಮತ್ ರಾಹಿಲ ಪಡೀಲು( ಪ್ರಥಮ ವಿಜ್ಞಾನ), ಅಸ್ಮತ್ ಮದ್ದಡ್ಕ ದ್ವಿತೀಯ.
ಜನರಲ್ ರಸಪ್ರಶ್ನೆ: ಫಾತಿಮಾ ಇಫ್ರತ್ ಪೆರಿಯಡ್ಕ(ದ್ವಿತೀಯ ಕಾಮರ್ಸ್) ಪ್ರಥಮ, ಫಾತಿಮಾ ಸಹ್ಲ ಬೆಳ್ಲಾರೆ(ದ್ವಿತೀಯ ಕಲಾ) ದ್ವಿತೀಯ, ಲಮಿಹ ಫಾತಿಮಾ ಕುಶಾಲನಗರ,(ದ್ವಿತೀಯ ವಿಜ್ಞಾನ), ಮುಬಶ್ಶಿರ ಈಶ್ವರಮಂಗಲ, ಸಹ್ಲ ಕರ್ನೂರು(ದ್ವಿತೀಯ ವಿಜ್ಞಾನ)ತೃತೀಯ.
ಖಿರಾಅತ್: ಜುನೈಹ ಮಾಡನ್ನೂರು (ಪ್ರಥಮ ವಿಜ್ಞಾನ) ಪ್ರಥಮ, ಫಾತಿಮತ್ ಶಿಫಾ ಕೆ ಮಾಡನ್ನೂರು(ದ್ವಿತೀಯ ವಾಣಿಜ್ಯ)ದ್ವಿತೀಯ, ಫಾತಿಮತ್ ಸುಹಾನ ಮಾಡನ್ನೂರು(ಪ್ರಥಮ ವಿಜ್ಞಾನ)ತೃತೀಯ.
ಹದೀಸ್ ಪ್ರೆಸೆಂಟೇಷನ್: ಫಾತಿಮಾ ಜಾಲ್ಸೂರು(ದ್ವಿತೀಯ ವಾಣಿಜ್ಯ) ಪ್ರಥಮ, ಫಾತಿಮಾ ಶಿಫಾ ಮಾಡನ್ನೂರು(ದ್ವಿತೀಯ ವಾಣಿಜ್ಯ)ದ್ವಿತೀಯ, ಫಾತಿಮಾ ಇಫ್ರತ್ ಪೆರಿಯಡ್ಕ(ದ್ವಿತೀಯ ವಾಣಿಜ್ಯ)ತೃತೀಯ.
ಬಿತ್ತಿಪತ್ರ ರಚನೆ: ಹಲೀಮಾ ಫಿದಾ ಉಪ್ಪಿನಂಗಡಿ (ದ್ವಿತೀಯ ಕಾಮರ್ಸ್) ಪ್ರಥಮ, ಫಾತಿಮತ್ ರೌಫತ್ ಬಂಟ್ವಾಳ (ದ್ವಿತೀಯ ವಿಜ್ಞಾನ) ದ್ವಿತೀಯ, ಹಲೀಮತುಲ್ ಆರಿಫಾ ಬೆಳ್ತಂಗಡಿ(ದ್ವಿತೀಯ ವಾಣಿಜ್ಯ)ತೃತೀಯ.
ಇಂಗ್ಲಿಷ್ ಪ್ರಬಂಧ: ನಫೀಸತ್ ಮುಫೀಝ ಒಕ್ಕೆತ್ತೂರು(ಪ್ರಥಮ ವಿಜ್ಞಾನ)ಪ್ರಥಮ, ಅಫ್ರತ್ ಬಾನು ಬಿ.ಟಿ ಚಿಕ್ಕಮಗಳೂರು (ಪ್ರಥಮ ವಿಜ್ಞಾನ)ದ್ವಿತೀಯ, ಸಹ್ಲ ಕರ್ನೂರು(ದ್ವಿತೀಯ ವಿಜ್ಞಾನ)ತೃತೀಯ.
ಕನ್ನಡ ಪ್ರಬಂಧ: ಅಲೀಮತ್ ಸೈದಾ ಮುಡಿಪು(ಪ್ರಥಮ ಕಲಾ) ಪ್ರಥಮ, ಶಾನಿಬಾ ಐವರ್ನಾಡು (ದ್ವಿತೀಯ ವಿಜ್ಞಾನ)ದ್ವಿತೀಯ, ಅಸ್ಮತ್ ಮದ್ದಡ್ಕ (ಪ್ರಥಮ ವಾಣಿಜ್ಯ)ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.