ರೋಟರಿ ಮನೀಷಾದಲ್ಲಿ ಅಪೌಸ್ಟಿಕ ಮಕ್ಕಳ ಆರೋಗ್ಯ ತಪಾಸಣೆ, ತಾಯಂದಿರಿಗೆ ಆರೋಗ್ಯ, ಪೌಷ್ಟಿಕಾಹಾರದ ಕುರಿತು ಮಾಹಿತಿ ಕಾರ್ಯಕ್ರಮ

0

ಅಪೌಸ್ಟಿಕತೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ-ಡಾ.ದೀಪಕ್ ರೈ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಪುತ್ತೂರು ಎಲೈಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪುತ್ತೂರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದ.ಕ ಜಿಲ್ಲೆ ಹಾಗೂ ನಿತ್ಯ ಫುಡ್ ಪ್ರಾಡಕ್ಟ್ ಇವರ ಸಹಯೋಗದೊಂದಿಗೆ ಅಪೌಸ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ತಾಯಂದಿರಿಗೆ ಆರೋಗ್ಯ ಮತ್ತು ಪೌಷ್ಟಿಕಾಹಾರದ ಕುರಿತು ಮಾಹಿತಿ ಕಾರ್ಯಕ್ರಮ ಫೆ.7 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿತು.

ಪುತ್ತೂರು ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಅಪೌಸ್ಟಿಕತೆಯಿರುವ ಮಕ್ಕಳಿಗೂ ಸಮಾಜದಲ್ಲಿ ಬದುಕುವ ಆಸೆಯಿರುತ್ತದೆ. ಪ್ರಸ್ತುತ ದಿನಗಳಲ್ಲಿ ಅಪೌಷ್ಟಿಕತೆ ಇರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಅಪೌಸ್ಟಿಕತೆಯಿಂದ ಬಳಲುತ್ತಿರುವ ಸಂಖ್ಯೆಯನ್ನು ಕೊನೆಗಾಣಿಸಬೇಕು ಎಂಬುದು ನಮ್ಮ ಗುರಿಯಾಗಿದೆ. ಅಪೌಸ್ಟಿಕತೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದುದು ಇಂದಿನ ಅಗತ್ಯತೆಯಾಗಿದೆ. ಶಾಲಾ-ಕಾಲೇಜುಗಳಲ್ಲೂ ಅಪೌಸ್ಟಿಕತೆ ಬಗ್ಗೆ ಜಾಗೃತಿ ಮೂಡಿಸುವ ಪ್ರಕ್ರಿಯೆ ಆಗುತ್ತಿದೆ ಎಂದರು.

ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿ ಮಾತನಾಡಿ, ಮಕ್ಕಳೆಂದರೆ ಎಲ್ಲರಿಗೂ ಪ್ರೀತಿ.ಮಗು ಆರೋಗ್ಯದಿಂದ್ದಾಗ ಎಲ್ಲವೂ ಖುಶಿಯೆನಿಸುತ್ತದೆ. ಎಲ್ಲಿ ಮಗುವಿನ ಆರೋಗ್ಯದಲ್ಲಿ ಏರುಪೇರಾದಾಗ ಮಗುವಿನ ಹೆತ್ತವರಿಗೆ ತುಂಬಾ ಕಷ್ಟವೆನಿಸುತ್ತದೆ. ಮಗುವಿಗೆ ಆರೋಗ್ಯದಾಯಕ ಆಹಾರವನ್ನು ನೀಡಬೇಕು. ಆದರೂ ಮಗುವಿನ ವಯಸ್ಸು, ತೂಕ, ಎತ್ತರ, ಬೆಳವಣಿಗೆಯಲ್ಲಿ ಏರುಪೇರಾಗುತ್ತದೆ. ಈ ನಿಟ್ಟಿನಲ್ಲಿ ಇಂದಿಲ್ಲಿ ನಡೆಯುವ ಕಾರ್ಯಕ್ರಮ ಅಪೌಸ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಮಕ್ಕಳ ತಾಯಂದಿರಿಗೆ ಉತ್ತಮ ವೇದಿಕೆಯಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಮಂಗಳಾ ಕಾಳೆ ಮಾತನಾಡಿ, ಮಕ್ಕಳಲ್ಲಿ ಪೌಸ್ಟಿಕಾಂಶದ ಆಹಾರ ಕೊರತೆಯಿಂದ ಅಪೌಸ್ಟಿಕತೆ ಉಂಟಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಪ್ರತಿ ಮಗುವು ಗುಣಮಟ್ಟದ ಆಹಾರ ಸೇವಿಸಬೇಕು, ವಯಸ್ಸು, ತೂಕ, ಎತ್ತರವನ್ನು ಹಂತ ಹಂತವಾಗಿ ಪರಿಶೀಲನೆ ಮಾಡಬೇಕು ಎಂದರು.

ನಿತ್ಯ ಚಪಾತಿ ಪ್ರಾಡಕ್ಟ್ ಮಾಲಕ ರಾಧಾಕೃಷ್ಣ ಮಾತನಾಡಿ, ಹಿಂದಿನ ಹಿರಿಯರು ಸಿರಿಧಾನ್ಯಗಳನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಿರುತ್ತಿದ್ದರು. ಆದರೆ ಇಂದು ಸಿರಿಧಾನ್ಯಗಳ ಬಳಕೆ ತುಂಬಾ ಕುಂಠಿತವಾಗಿದೆ. ಸಿರಿಧಾನ್ಯಗಳಲ್ಲಿ ಪೌಷ್ಟಿಕಾಂಶ, ವಿಟಮಿನ್ ಗಳು ಹೇರಳವಾಗಿದ್ದು ಅವು ಮನುಷ್ಯನ ಉತ್ತಮ ಆರೋಗ್ಯಕ್ಕೆ ಬುನಾದಿಯಾಗಿದೆ ಮಾತ್ರವಲ್ಲ ಉತ್ತಮ ಆರೋಗ್ಯಕರ ಸಮಾಜಕ್ಕೆ ಇದು ನಾಂದಿ ಹಾಡಬಲ್ಲುದು ಎಂದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್, ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಜೈದೀಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಪ್ಪಳಿಗೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸುಮಿತ್ರಾ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್ಸ್ ವಂದಿಸಿದರು. ರೋಟರಿ ಎಲೈಟ್ ಸದಸ್ಯ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿ ನಿಯೋಜಿತ ಅಧ್ಯಕ್ಷ ಮೊಹಮದ್ ಸಾಬ್, ವಿಕ್ಟರ್ ಮಾರ್ಟಿಸ್, ಪುತ್ತೂರು ಸರಕಾರಿ ಆಸ್ಪತ್ರೆ ಸಿಬ್ಬಂದಿಗಳು, ಆರೋಗ್ಯ ಮತ್ತು ಕುಟುಂಬ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಕ್ಕಳಲ್ಲಿ ಅಪೌಸ್ಟಿಕತೆ ಬಂದ ಮೇಲೆ ಏನು ಮಾಡಬೇಕು ಎಂಬುದು ತಾಯಂದಿರು ಅರಿಯಬೇಕಾಗಿದೆ. ಅಪೌಸ್ಟಿಕತೆ ಇರುವ ಮಕ್ಕಳು ವಿವಿಧ ರೋಗಗಳಿಗೆ ತುತ್ತಾಗುವುದು ಸಹಜ. ಮಗು ಜನಿಸಿದ ಮೊದಲ ಆರು ತಿಂಗಳು ತಾಯಿ ಎದೆ ಹಾಲುಣಿಸುವಿಕೆಯಿಂದ ಮಗುವಿನಲ್ಲಿ ರೋಗನಿರೋಧಕ, ಪ್ರೋಟೀನ್ ಶಕ್ತಿಯನ್ನು ವೃದ್ಧಿಸುತ್ತದೆ. ಅಂಗನವಾಡಿಗಳಲ್ಲಿ ಪೌಸ್ಟಿಕತೆ ಇರುವ ಆಹಾರ ಸಿಗುವುದರಿಂದ ಅವುಗಳನ್ನು ಹೆಚ್ಚೆಚ್ಚು ಸೇವಿಸುವಂತಾಗಬೇಕು ಸರಕಾರ ಕೂಡ ಈ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸಿದೆ.
-ಡಾ.ಪ್ರಶಾಂತ್ ಬಿ.ಎನ್, ಸಂಪನ್ಮೂಲ ವ್ಯಕ್ತಿ ಹಾಗೂ ಮಕ್ಕಳ ತಜ್ಞರು, ಸಾರ್ವಜನಿಕ ಸರಕಾರಿ ಆಸ್ಪತ್ರೆ, ಪುತ್ತೂರು

LEAVE A REPLY

Please enter your comment!
Please enter your name here