*ಫೆ.10: ಸ್ಥಳಶುದ್ಧಿ – ಬೆಳ್ಳಿಯ ಮುಟ್ಟಲೆ ಸಮರ್ಪಣೆ
*ಫೆ.11: ಗುಳಿಗ ಕೊರಗಜ್ಜ ದೈವದ ದೊಂದಿ ಬೆಳಕಿನ ನೇಮೋತ್ಸವ
*ಫೆ.12: ಗುಳಿಗ ದೈವದ ತಂಬಿಲ, ಕೊರಗಜ್ಜ ದೈವದ ಅಗೇಲು ಸೇವೆ
ಪುತ್ತೂರು: ಕಾರಣಿಕದ ಕ್ಷೇತ್ರಗಳಲ್ಲಿ ಒಂದಾದ ಕೊಡಿಪಾಡಿ ಗ್ರಾಮದ ಅರ್ಕ ಶ್ರೀ ಗುಳಿಗ ಕೊರಗಜ್ಜ ಕ್ಷೇತ್ರದಲ್ಲಿ ಫೆ.10ರಿಂದ ಫೆ.12ರ ವರೆಗೆ ಗುಳಿಗ ಕೊರಗಜ್ಜ ದೈವದ ದೊಂದಿ ಬೆಳಕಿನ ವರ್ಷಾವಧಿ ನೇಮೋತ್ಸವ, ಕೊರಗಜ್ಜನಿಗೆ ಬೆಳ್ಳಿಯ ಮುಟ್ಟಲೆ ಸಮರ್ಪಣೆ, ತಂಬಿಲ, ಅಗೆಲುಸೇವೆಗಳು ನಡೆಯಲಿದೆ.
ಫೆ.10ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಸ್ಥಳಶುದ್ಧಿ, ಬಳಿಕ ಪುತ್ತೂರಿನ ಉದ್ಯಮಿಯಿಂದ ಶ್ರೀ ಕೊರಗಜ್ಜ ದೈವಕ್ಕೆ ಬೆಳ್ಳಿಯ ಮುಟ್ಟಲೆ ಸಮರ್ಪಣೆ, ದೈವಗಳಿಗೆ ಪರ್ವ ನಡೆಯಲಿದೆ. ಫೆ.11ರಂದು ಸಾಯಂಕಾಲದಿಂದ ವಿವಿಧ ಭಜನಾ ತಂಡಗಳಿಂದ ಭಜನೆ, ರಾತ್ರಿ ಗಂಟೆ 7ರಿಂದ ಗುಳಿಗ ದೈವದ ನೇಮ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಕೊರಗಜ್ಜ ದೈವದ ದೊಂದಿ ಬೆಳಕಿನ ನೇಮ ನಡೆಯಲಿದೆ.
ಫೆ.12ರಂದು ಸಾಯಂಕಾಲ ಗುಳಿಗ ದೈವದ ತಂಬಿಲ, ರಾತ್ರಿ ಕೊರಗಜ್ಜ ದೈವದ ಅಗೇಲು ಸೇವೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಆರಾಧಕರಾದ ಸುಕುಮಾರ ಅಂಚನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.