ಮಂಗಳೂರಿನಲ್ಲಿ ಮುಕ್ವೆ ಮೂಲದ ವಿದ್ಯಾರ್ಥಿನಿ ನಾಪತ್ತೆ: ಉಳ್ಳಾಲ ಪೊಲೀಸ್ ಠಾಣೆಗೆ ದೂರು

0

ಪುತ್ತೂರು: ಕೋಟೆಕಾರು ಬಳಿಯ ಮಾಡೂರಿನ ಪಿಜಿಯೊಂದರಲ್ಲಿದ್ದು ದೇರಳಕಟ್ಟೆಯ ಖಾಸಗಿ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದ ಪುತ್ತೂರು ಮೂಲದ ವಿದ್ಯಾರ್ಥಿನಿ ಮೂರು ದಿನಗಳಿಂದ ನಾಪತ್ತೆಯಾಗಿದ್ದು ಪುತ್ತೂರಿನ ಅನ್ಯಧರ್ಮದ ಯುವಕನೊಂದಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.


ಪುತ್ತೂರು ನರಿಮೊಗರು ಗ್ರಾಮದ ಮುಕ್ವೆ ಮೂಲದ ಚೈತ್ರಾ ಹೆಬ್ಬಾರ್(27ವ) ನಾಪತ್ತೆಯಾದ ವಿದ್ಯಾರ್ಥಿನಿ. ಚೈತ್ರಾ ದೇರಳಕಟ್ಟೆಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಂಎಸ್ಸಿ ಮುಗಿಸಿ ಫುಡ್ ಸೆಕ್ಯುರಿಟಿ ವಿಷಯದಲ್ಲಿ ಪಿಎಚ್ ಡಿ ಅಧ್ಯಯನ ನಡೆಸುತ್ತಿದ್ದರು. ಕೋಟೆಕಾರು ಮಾಡೂರಿನ ಅಹನಾ ಎಂಬ ಪಿಜಿಯಲ್ಲಿ ಸ್ನೇಹಿತೆಯರೊಂದಿಗೆ ಚೈತ್ರಾ ನೆಲೆಸಿದ್ದಳು.


ಚೈತ್ರಾಳ ತಂದೆ ಸತೀಶ್ ಹೆಬ್ಬಾರ್ ಅವರು ನಿಧನರಾದ ಬಳಿಕ ಮಂಗಳೂರಿನ ಕದ್ರಿಯಲ್ಲಿ ನೆಲೆಸಿರುವ ದೊಡ್ಡಪ್ಪನ ಆಶ್ರಯದಲ್ಲಿದ್ದು ಎಂಎಸ್ಸಿ ಪೂರೈಸಿದ್ದಳು. ಕಳೆದ ಫೆ.17 ರಂದು ಬೆಳಗ್ಗೆ 9 ಗಂಟೆಗೆ ಮಾಡೂರಿನ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದ ಚೈತ್ರಾ ಕದ್ರಿಯ ಮನೆಗೂ ತೆರಳದೆ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾಳೆ. ಚೈತ್ರಾ ನೆಲೆಸಿದ್ದ ಪಿಜಿಗೆ ಪುತ್ತೂರಿನ ಅನ್ಯಧರ್ಮದ ಯುವಕನೋರ್ವ ಬರುತ್ತಿದ್ದು, ಆತನೊಂದಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಫೆ.17 ರಂದು ಚೈತ್ರಾ ನಾಪತ್ತೆಯಾದ ವಿಚಾರ ತಿಳಿದ ದೊಡ್ಡಪ್ಪ ಮರುದಿನ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here