ಏಸ್ ಮೋಟಾರ‍್ಸ್‌ನಲ್ಲಿ ಟಿವಿಎಸ್‌ನ ಹೊಸ ಜುಪಿಟರ್ 125 ‘ಸ್ಮಾರ್ಟ್ ಎಕ್ಸನೆಕ್ಟ್’ ಬಿಡುಗಡೆ

0

ಪುತ್ತೂರು:ಭಾರತದ ಪ್ರತಿಷ್ಠಿತ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಟಿವಿಎಸ್ ಅತ್ಯಾಧುನಿಕ ಹಾಗೂ ಸುಧಾರಿತ ತಂತ್ರಜ್ಞಾನಗಳು, ವಿನೂತನ ವೈಶಿಷ್ಠ್ಯಗಳನ್ನು ಒಳಗೊಂಡಿರುವ ಜುಪಿಟರ್ 125 ಸ್ಮಾರ್ಟ್ ಎಕ್ಸನೆಕ್ಟ್‌ನ್ನು ಬೊಳುವಾರಿನಲ್ಲಿರುವ ಏಸ್ ಮೋಟಾರ‍್ಸ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿತು.


ಕಡಬ ಸಂಗೀತ ಎಲೆಕ್ಟ್ರಾನಿಕ್ಸ್ ಪ್ರಣೀತಾ ದಿನೇಶ್ ನೂತನ ವಾಹನದ ಪ್ರಥಮ ಖರೀದಿ ಮಾಡಿದರು. ಮ್ಹಾಲಕ ಆಕಾಶ್ ಐತಾಳ್ ವಾಹನದ ಕೀಲಿ ಕೈ ಹಸ್ತಾಂತರಿಸಿದರು.
ಆಧುನಿಕ ಸಂಪರ್ಕ, ಸುರಕ್ಷತೆ ಮತ್ತು ಅನುಕೂಲತೆಯ ಸಂಯೋಜನೆಯೊಂದಿಗೆ ಇಂದಿನ ಡಿಜಿಟಲ್ ಯುಗದಲ್ಲಿ ಸವಾರರ ಅಗತ್ಯತೆ ಮತ್ತು ನಿರೀಕ್ಷೆಗಳಿಗೆ ಹೊಂದಾಣಿಕೆಯಾಗುವಂತೆ ಹೊಸ ಮಾದರಿಯಲ್ಲಿ ತಯಾರಿಸಲಾಗಿದೆ. ಉತ್ತಮ ಸವಾರಿಯ ಅನುಭವಕ್ಕಾಗಿ ಸುಧಾರಿತ ವೈಶಿಷ್ಠ್ಯಗಳ ಶ್ರೇಣಿಯನ್ನು ಹೊಂದಿದೆ. ಈ ಆಧುನಿಕ ತಂತ್ರಜ್ಞಾನವು ಸವಾರನೊಂದಿಗೆ ಸಂಪರ್ಕದಲ್ಲಿರುವುದನ್ನು ಖಚಿತಪಡಿಸಲಿದೆ. ಸುಗಮ ಹಾಗೂ ಸುರಕ್ಷಿತ ಪ್ರಯಾಣವನ್ನು ಖಾತ್ರಿ ಪಡಿಸಿಲಿದೆ. ಇಂಟಿಗ್ರೇಟೆಡ್ ಮೊಬೈಲ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಸವಾರನು ಪ್ರಯಾಣದಲ್ಲಿದ್ದಾಗ ಯಾವುದೇ ಸಮಯದಲ್ಲಿಯೂ ಸಂಪರ್ಕದಲ್ಲಿರುವಂತೆ ವಿನ್ಯಾಸಗೊಳಿಸಲಾಗಿದೆ. ಸ್ಮಾರ್ಟ್ ಎಕ್ಸ್‌ಟಾಕ್ ಹಾಗೂ ಸ್ಮಾಟ್ ಎಕ್ಸ್‌ಟ್ರಾಕ್ ಎಂಬ ನವನವೀನ ಮಾದರಿಯ ಸಂಪರ್ಕದ ವೈಶಿಷ್ಠ್ಯತೆಗಳು ಹಿಂದಿಗಿಂತಲೂ ರೂಪಾಂತರಗೊಂಡಿದೆ.


ಪ್ರಯಾಣದ ಸಮಯದಲ್ಲಿ ಸವಾರರಿಗೆ ಅನುಕೂಲವಾಗುವಂತೆ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಸುರಕ್ಷತೆಗಾಗಿ ಧ್ವನಿ ಮತ್ತು ಆಜ್ಞೆಗಳು, ಮೊಬೈಲ್ ಕರೆ ಮತ್ತು ಸಂದೇಶಗಳು ಸ್ಕೂಟರ್‌ನ ಡಿಸ್ಪ್ಲೇಯಲ್ಲಿ ಕಾಣಬಹುದು. ಆನ್‌ಲೈನ್ ನೆಟ್‌ವರ್ಕ್‌ಗಳೊಂದಿಗೆ ನವೀಕರಿಸಲಾಗಿದ್ದು ಸಾಮಾಜಿಕ ಜಾಲತಾಣಗಳು, ಆಹಾರ, ಶಾಪಿಂಗ್, ಆಪ್‌ಗಳ ಸಂದೇಶಗಳು, ಕ್ರಿಕೆಟ್, ಪುಟ್‌ಬಾಲ್ ಮೊದಲಾದ ನೆಚ್ಚಿನ ಕ್ರೀಡೆಗಳ ಸ್ಕೂರ್‌ಗಳು, ಹವಾಮಾನದ ಮಾಹಿತಿಗಳು, ವರದಿಗಳು ಲೈವ್‌ಆಗಿ ಮಾಹಿತಿ ನೀಡಲಿದೆ. ಈ ವಾಹನದ ಸೀಟ್‌ನಲ್ಲಿ ವಿಶೇಷವಾಗಿ ಬ್ಯಾಕ್‌ರೆಸ್ಟ್‌ನ್ನು ಒಳಗೊಂಡಿದೆ. ಎಂಜಿನ್ ಆಫ್ ಮಾಡಿದ 20 ಸೆಕುಂಡುಗಳ ಕಾಲ ಪ್ರಕಾಶಿಸುವಂತ ವೈಶಿಷ್ಟ್ಯವಿರುವ ಹೆಡ್‌ಲೈಟ್ ಸೇರಿದಂತೆ ಹಲವು ಅತ್ಯಾಧುನಿಕ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣಗೊಂಡಿದೆ. ಎಲಿಗೆಂಟ್ ರೆಡ್ ಹಾಗೂ ಮ್ಯಾಟ್ ಕಾಪರ್ ಬ್ರೌನ್ಸ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಈ ವಾಹನದ ಬುಕ್ಕಿಂಗ್ ಈಗಾಗಲೇ ಪ್ರಾರಂಭಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಶೋ ರೂಂ ಅಥವಾ ಮೊಬೈಲ್ 7022003166ನಂಬರ್‌ನ್ನು ಸಂಪರ್ಕಿಸಬಹುದು.


ಫೆಬ್ರವರಿ ಧಮಕಾ-ಕ್ಯಾಶ್ ಡಿಸ್ಕೌಂಟ್ ಆಫರ್:
ಸಂಸ್ಥೆಯಲ್ಲಿ ಇತರ ಎಲ್ಲಾ ದ್ವಿಚಕ್ರ ವಾಹನಗಳ ಖರೀದಿಗೆ ಫೆಬ್ರವರಿ ಧಮಕಾ ಕ್ಯಾಶ್ ಡಿಸ್ಕೌಂಟ್‌ನ ಮಹೋನ್ನತ ಕೊಡುಗೆಗಳನ್ನು ನೀಡುತ್ತಿದ್ದು ಈ ಕೊಡುಗೆಗಳು ಫೆ.29ರ ತನಕ ದೊರೆಯಲಿದೆ. ಗ್ರಾಹಕರು ಈ ಸೀಮಿತ ಅವಧಿಯ ಕೊಡುಗೆಗಳನ್ನು ಸದುಪಯೋಗಪಡಿಸಿಕೊಳ್ಳಬಹುದು. ಅತೀ ಕಡಿಮೆ ಡೌನ್‌ಪೇಮೆಂಟ್, ಕಡಿಮೆ ಹಾಗೂ ಸುಲಭ ಮಾಸಿಕ ಕಂತುಗಳ ಯೋಜನೆಯ ಸರಳ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಳ ದಾಖಲೆಯೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಸುಲಭ ಹಣಕಾಸು ಸೌಲಭ್ಯ, ಸ್ಥಳದಲ್ಲೇ ಫೈನಾನ್ಸ್, ಎಕ್ಸ್‌ಚೇಂಜ್, ಬುಕ್ಕಿಂಗ್ ಹಾಗೂ ವಿತರಣಾ ಸೌಲಭ್ಯ ನೀಡಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here