ನಾಳೆ(ಫೆ.22) ಇರ್ದೆ-ಪಳ್ಳಿತ್ತಡ್ಕ ಉರೂಸ್ ಉದ್ಘಾಟನೆ-ಮಶ್ಹೂದ್ ಸಖಾಫಿ ಗೂಡಲ್ಲೂರುರವರಿಂದ ಪ್ರಭಾಷಣ

0

ಪುತ್ತೂರು: ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್‌ನಲ್ಲಿ 48ನೇ ಉರೂಸ್ ಸಮಾರಂಭ ಹಾಗೂ 7 ದಿವಸಗಳ ಧಾರ್ಮಿಕ ಮತ ಪ್ರಭಾಷಣ ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಫೆ.22ರಿಂದ ಫೆ.28ರ ವರೆಗೆ ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ ವಠಾರದಲ್ಲಿ ನಡೆಯಲಿದೆ.


ಉದ್ಘಾಟನಾ ದಿನವಾದ ಫೆ.22ರಂದು ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ದುವಾ ನೆರವೇರಿಸಲಿದ್ದು ಕೊರಿಂಗಿಲ ಜುಮಾ ಮಸ್ಜಿದ್ ಖತೀಬ್ ಜಿ.ಎಚ್ ಅಯ್ಯೂಬ್ ವಹಬಿ ಗಡಿಯಾರ ಉದ್ಘಾಟಿಸಲಿದ್ದಾರೆ. ಕೊರಿಂಗಿಲ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಕೊರಿಂಗಿಲ ಅಧ್ಯಕ್ಷತೆ ವಹಿಸಲಿದ್ದು

ಖ್ಯಾತ ಪ್ರಭಾಷಣಗಾರ ಹಾಫಿಲ್ ಮಶ್ಹೂದ್ ಸಖಾಫಿ ಗೂಡಲ್ಲೂರು ಅವರು ‘ಮಹಾನ್ಮಾರೋಡುಲ್ಲ ಬಂಧಂ’ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here