ಬನ್ನೂರು ಶ್ರೀ ದೈಯ್ಯೆರೆ ಮಾಡ ನಡಿಮಾರ್ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ-ಸಹಸ್ರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆ

0

ಪುತ್ತೂರು: ಸಂತಾನ ಭಾಗ್ಯ ಸಹಿತ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಯಾಗಿ ಗೋಚರಿಸಿದ ಬನ್ನೂರು ಗ್ರಾಮದ ದೈಯರ ಮಾಡ ನಡಿಮಾರು ಮತ್ತು ಆನೆಮಜಲು ನ್ಯಾಯಾಲಯದ ಸಂಕೀರ್ಣದಲ್ಲಿರುವ ಶ್ರೀ ಇಷ್ಟದೇವತೆ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ ಸಾನಿಧ್ಯದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಕುಂಟಾರು ವಾಸುದೇವ ತಂತ್ರಿಯವರ ವೈದಿಕತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮಧ್ಯಾಹ್ನ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು.


ಫೆ. 22ರಂದು ಬೆಳಿಗ್ಗೆ ಗಣಪತಿ ಹವನ, ಬಾವುದ ಕೆರೆಯ ಬಳಿ ನಾಗತಂಬಿಲ, ದೈಯ್ಯೆರೆ ಮಾಡದಲ್ಲಿ ಬ್ರಹ್ಮಕಲಶಪೂಜೆ ಬಳಿಕ ಪ್ರತಿಷ್ಠೆ. ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬೆಳಿಗ್ಗೆ ಬನ್ನೂರು ಶ್ರೀ ಶಿವಪಾರ್ವತಿ ಮಂದಿರ, ನವೋದಯ ಮಹಿಳಾ ಮಂಡಳಿ ಬನ್ನೂರು, ಬೊಳುವಾರು ವೈದೇಹಿ ಭಜನಾ ಮಂಡಳಿ, ಕುಂಟ್ಯಾನ ಬ್ರಾಹ್ಮರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನ ಅನ್ನಸಂತರ್ಪಣೆ ಸಂದರ್ಭದಲ್ಲಿ ಹರಿದಾಸ ಶ್ರೀ ಮಂಡ್ಯ ಮಧುಸೂಧನ್ ತಂಡದಿಂದ ಹರಿಕಥಾ ಕಾಲಕ್ಷೇಪ ’ ಗಿರಿಜಾ ಕಲ್ಯಾಣ’ ನಡೆಯಿತು. ಸಂಜೆ ಕಲರ‍್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು. ಉಮೇಶ್ ಮೂಡಾಯುರು ಅವರಿಂದ ಸ್ಯಾಕ್ಸೋಪೋನ್ ವಾದನ ನಡೆಯಿತು.

LEAVE A REPLY

Please enter your comment!
Please enter your name here