ದರ್ಬೆಯಲ್ಲಿ ಎಸ್ತೆಟಿಕ್ ಸ್ಮೈಲ್ಸ್ ಡೆಂಟಲ್ ಕ್ಲಿನಿಕ್ ಶುಭಾರಂಭ

0

ಪುತ್ತೂರು: ದರ್ಬೆ ಶ್ರೀಲಕ್ಷ್ಮೀ ಕಮರ್ಷಿಯಲ್ ಸೆಂಟರ್‌ನ 2ನೇ ಮಹಡಿಯಲ್ಲಿ ಡಾ.ಕೀರ್ತಿಕಾರವರ ಎಸ್ತೆಟಿಕ್ ಸ್ಮೈಲ್ಸ್ ಡೆಂಟಲ್ ಕ್ಲಿನಿಕ್ ಫೆ.22ರಂದು ಶುಭಾರಂಭಗೊಂಡಿತು. ಉದ್ಯಮಿ ಸಿಝ್ಲರ್‌ನ ಪ್ರಸನ್ನ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

ಬಿಜೆಪಿ ಯುವಮೋರ್ಛಾ ಜಿಲ್ಲಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜ ರಿಬ್ಬನ್ ಕತ್ತರಿಸಿ ಮಾತನಾಡಿ, ಬೆಳೆಯುತ್ತಿರುವ ಪುತ್ತೂರು ನಗರದಲ್ಲಿ ಡೆಂಟಲ್ ಕ್ಲಿನಿಕ್ ಪ್ರಾರಂಭವಾಗಿರುವುದು ಹೆಮ್ಮೆಯ ವಿಷಯ. ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಿ ಜನರಿಗೆ ಉತ್ತಮ ಸೇವೆ ದೊರೆಯಲಿ ಎಂದು ಹೇಳಿ ಶುಭಹಾರೈಸಿದರು.

ಮಂಗಳೂರು ಎನ್.ಎಮ್.ಪಿ.ಟಿ ನಿವೃತ್ತ ಸೀನಿಯರ್ ಮೆಕಾನಿಕ್ ದಾದು ಸಂಟ್ಯಾರ್, ಎಸ್.ಬಿ.ಐ ನಿವೃತ್ತ ಮ್ಯಾನೇಜರ್ ಯೋಗೀಶ್ ಕೆ, ಡಾ.ಕ್ಷೇಮಾ ನಂಬಿಯಾರ್ ಕೌಡಿಚ್ಚಾರ್, ಲಕ್ಷ್ಮೀ ಕಮರ್ಷಿಯಲ್ ಸೆಂಟರ್‌ನ ಮಾಲಕ ಭರತ್ ಪೈ ಉಪಸ್ಥಿತರಿದ್ದರು. ಎಸ್ತೆಟಿಕ್ ಸ್ಮೈಲ್ಸ್’ನ ವೈದ್ಯೆ ಡಾ.ಕೀರ್ತಿಕಾರವರ ತಾಯಿ ಮೋಹಿನಿ , ಸಹೋದರ ಶರತ್-ಮೋಹನ್ ಅತಿಥಿ ಗಣ್ಯರನ್ನು ಸತ್ಕರಿಸಿದರು.

ಶುಭಾರಂಭದ ಪ್ರಯುಕ್ತ ಮಾ.3ರವರೆಗೆ ಉಚಿತ ದಂತ ತಪಾಸಣೆ, ಹಲ್ಲಿನ ಚಿಕಿತ್ಸೆಯಲ್ಲಿ ಶೇ.30 ರಿಯಾಯಿತಿ:
ಎಸ್ತೆಟಿಕ್ ಸ್ಮೈಲ್ಸ್’ನ ವೈದ್ಯೆ ಡಾ.ಕೀರ್ತಿಕಾ ಸ್ವಾಗತಿಸಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಹಲ್ಲಿನ ಎಕ್ಸ್-ರೇ, ಹಲ್ಲು ಶುಚಿಗೊಳಿಸುವಿಕೆ, ಹಲ್ಲಿನ ಗುಳಿ ತುಂಬುವುದು, ಆರ್.ಸಿ.ಟಿ (ಹಲ್ಲಿನ ಬೇರು ಚಿಕಿತ್ಸೆ), ಕ್ರೌನ್ಸ್ & ಬ್ರಿಡ್ಜಸ್, ಪೂರ್ಣ ಮತ್ತು ಭಾಗಶಃ ದಂತಗಳು, ನೋವು ರಹಿತ ಹೊರತೆಗೆಯುವಿಕೆಗಳು, ಪೀಡಿಯಾಟ್ರಿಕ್ ಡೆಂಟಿಸ್ಟ್ರಿ (ಮಕ್ಕಳ ವಲಯ), ಆರ್ಥೋಡಾಂಟಿಕ್ ಚಿಕಿತ್ಸೆ(ಬ್ರೆಸಸ್) ಸೇವೆಗಳು ಲಭ್ಯವಿದೆ. ಶುಭಾರಂಭದ ಪ್ರಯುಕ್ತ ಆರಂಭಿಕ ಕೊಡುಗೆಗಳನ್ನು ನೀಡಿದ್ದು ಫೆ.22ರಿಂದ ಮಾ.3ರವರೆಗೆ ಉಚಿತ ದಂತ ತಪಾಸಣೆ ಮತ್ತು ಎಲ್ಲಾ ಹಲ್ಲಿನ ಚಿಕಿತ್ಸೆಯಲ್ಲಿ ಶೇ.30 ರಿಯಾಯಿತಿಗಳನ್ನು ನೀಡಲಾಗುವುದು ಎಂದರು.

LEAVE A REPLY

Please enter your comment!
Please enter your name here